ಈಶ್ವರನಗರ ರೆಸಿಡೆನ್ಸಿಯಲ್ ವೆಲ್ಪಾರ್ ಅಸೋಸಿಯೇಶನ್‌ನ ಸರ್ವ ಸಾಧಾರಣ ಸಭೆ 26-12-2020ರಂದು ಓನ್‌ಲೈನ್ ಮುಖಾಂತರ ಜರಗಿತು. ಕುಮಾರಿ ಶರಣ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ, ಅಧ್ಯಕ್ಷರಾದ ಡಾ. ಸುರೇಶರಮಣ ಮಯ್ಯ ಅವರು ಸ್ವಾಗತಿಸಿ, ಕಳೆದ ಸಾಲಿನಲ್ಲಿ ಅಸೊಸಿಯೇಶನ್ ಹಮ್ಮಿಕೊಂಡ ಕಾರ್ಯಕ್ರಮಗಳ ಬಗೆಗೆ ಬೆಳಕು ಚೆಲ್ಲಿದರು. ನಂತರ ಅಸೋಸಿಯೇಶನ್‌ನ ಕಾರ್ಯದರ್ಶಿ ಶ್ರೀ ನಾಗರಾಜ್ ಕೆ ಅವರು ಕಳೆದ ಸಾಲಿನಲ್ಲಿ ಅಸೋಸಿಯೇಶನ್‌ನ ಆಶ್ರಯದಲ್ಲಿಕೈಗೊಂಡ ವಿವಿದ ಕಾರ್ಯಕ್ರಮಗಳನ್ನು ವಿವರಿಸಿದರು. ಖಜಾಂಚಿ ಡಾ. ರಾಘವೇಂದ್ರ ಕಾಮತ್ ಅವರು 2019-2020ರ ಲೆಕ್ಕ ಪತ್ರಗಳನ್ನು ಸಭೆಗೆ ಮಂಡಿಸಿ ಸಭೆಯ ಅನುಮತಿ ಪಡೆದರು. ನಂತರ ನಡೆದ ಚರ್ಚೆಗಳಲ್ಲಿ ಶ್ರೀ ರಾಜವರ್ಮ, ಡಾ. ಯಜ್ನೇಶ ಶರ್ಮ, ಡಾ ಬಾಲಚಂದ್ರ, ಡಾ. ಶಿವಪ್ರಸಾದ, ಪ್ರೊ. ಮಾಧವ ಶಾನುಭಾಗ್ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಸ್ಥಳೀಯ ಕೌನ್ಸಿಲರ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಮಂಜುನಾಥ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ಥಳೀಯ ಸಂಸ್ಥೆ ತೆಗೆದುಕೊಂಡ ಕಾರ್ಯಕ್ರಮಗಳ ಬಗೆಗೆ ವಿಷದವಾಗಿ ವಿವರಿಸಿದರು. ಕೊನೆಯಲ್ಲಿ ಜರಗಿದ ಓನ್‌ಲೈನ್ ಮನರಂಜನಾ ಕಾರ್ಯಕ್ರಮದಲ್ಲಿ ಶರಣ್ಯ, ಪ್ರತೀಕ್, ದೀಪಕ್, ದೀಪ್ತಿ ಹಾಗೂ ಇತರ ಸದಸ್ಯರ ನೃತ್ಯ ಹಾಗೂ ಹಾಡುಗಳನ್ನು ಬಿತ್ತರಿಸಲಾಯಿತು. ಕಾರ್ಯದರ್ಶಿ ಶ್ರೀ ನಾಗರಾಜ್ ಕೆ ಅವರಿಂದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಈಶ್ವರನಗರ ರೆಸಿಡೆನ್ಸಿಯಲ್ ವೆಲ್ಪಾರ್ ಅಸೋಸಿಯೇಶನ್‌ನ ಸರ್ವ ಸಾಧಾರಣ ಸಭೆಯ ನಡಾವಳಿಗಳು
ಹಾಗೂ ಇತರ ಚರ್ಚಿಸಿದ ವಿಷಯಗಳು
ಈಶ್ವರನಗರ ರೆಸಿಡೆನ್ಸಿಯಲ್ ವೆಲ್ಪಾರ್ ಅಸೋಸಿಯೇಶನ್‌ನ ಸರ್ವ ಸಾಧಾರಣ ಸಭೆ 26-12-2020ರಂದು ಓನ್‌ಲೈನ್ ಮುಖಾಂತರ ಜರಗಿತು. ಕುಮಾರಿ ಶರಣ್ಯ ಅವರ ಪ್ರಾರ್ಥನೆಯೊಂದಿಗೆ
ಆರಂಭವಾದ ಸಭೆಯಲ್ಲಿ, ಅಧ್ಯಕ್ಷರಾದ ಡಾ. ಸುರೇಶರಮಣ ಮಯ್ಯ ಅವರು ಸ್ವಾಗತಿಸಿ, ಕಳೆದ ಸಾಲಿನಲ್ಲಿ ಅಸೊಸಿಯೇಶನ್
ಹಮ್ಮಿಕೊಂಡ ಕಾರ್ಯಕ್ರಮಗಳ ಬಗೆಗೆ ಬೆಳಕು ಚೆಲ್ಲಿದರು. ನಂತರ ಅಸೋಸಿಯೇಶನ್‌ನ ಕಾರ್ಯದರ್ಶಿ ಶ್ರೀ ನಾಗರಾಜ್
ಕೆ ಅವರು ಕಳೆದ ಸಾಲಿನಲ್ಲಿ ಅಸೋಸಿಯೇಶನ್‌ನ ಆಶ್ರಯದಲ್ಲಿಕೈಗೊಂಡ ವಿವಿದ ಕಾರ್ಯಕ್ರಮಗಳನ್ನು ಈ ಕೆಳಗೆ
ನಮೂದಿಸಿದಂತೆ ವಿವರಿಸಿದರು.
1.
2019ರ ಸಪ್ಟೆಂಬರ್ ತಿಂಗಳ 14ನೇ ತಾರೀಕಿನ ಶನಿವಾರದಂದು ನಮ್ಮ ಅಸೋಸಿಯೇಶನ್
ಇದರ ಸರ್ವ ಸಾಧಾರಣ ಸಭೆ ವೈಶ್ನವಿ ಹಾಲ್‌ನಲ್ಲಿ ಜರಗಿತು. ಅದರಲ್ಲಿ ಹೊಸ ಕಾರ್ಯಕಾರಿ ಸಮಿತಿಯನ್ನು
ಆರಿಸಲಾಯಿತು.
2.
ಅಕ್ಟೋಬರ್ 2,2019ರಂದು ಅಸೋಸಿಯೇಶನ್ ಹಾಗೂ ಸ್ನೇಹ ಸಂಗಮ ಮತ್ತು
ಇತರ ಸ್ಥಳೀಯ ಸಂಘಟನೆಗಳ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ
ಲಾಲ್ ಬಹದ್ದೂರ್ ಶಾಸ್ತ್ರಿ ಅವರ 115ನೇ ಜನ್ಮ ದಿನಾಚರಣೆಯನ್ನು
ಸ್ವಚ್ಛತಾ ಅಭಿಯಾನದ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ಸ್ವತಂತ್ರ್ಯ ಹೋರಾಟಗಳ ಜತೆಗೆ ಮಹಾತ್ಮಾಗಾಂಧೀಜಿ
ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ತಮ್ಮ ಸುಸಂಸ್ಕ್ರತ
ನಡವಳಿಕೆ ಮತ್ತು ವ್ಯಕ್ತಿತ್ವಗಳಿಂದ ದೇಶದ ಜನರಿಗೆ ಇಂದಗೂ ನಿತ್ಯ ಸಮರಣೀಯರು ಮತ್ತು ಆದರ್ಶಪ್ರಾಯರೂ
ಆಗಿದ್ದಾರೆ ಎಂದು ಸಹಕಾರ ಭಾರತಿ ಅಧ್ಯಕ್ಛ ದಿನೇಶ್ ಹೆಗ್ಡೆ ಅತ್ರಾಡಿ ಹೇಳಿದರು. ಡಾ. ಸುರೇಶರಮಣ
ಮಯ್ಯರು ಅಧ್ಯಕ್ಛತೆ ವಹಿಸಿದ್ದರು. ಕಲಾವಿದ ಶ್ರೀನಾಥ್ ಮಣಿಪಾಲ ಮತ್ತು ನಗರಸಭಾ ಸದಸ್ಯ ಮಂಜುನಾಥ್
ಮಣಿಪಾಲ ಕಾರ್ಯಕ್ರಮ ಸಂಯೋಜಿಸಿದರು. ಸ್ನೇಹ ಸಂಗಮ ಅಧ್ಯಕ್ಛ ಹರೀಶ್ ಜಿ. ಕಲ್ಮಾಡಿ, ಎರ್ಲಪ್ಪಾಡಿ
ಗ್ರಾಮದ ಯೋಜನಾಆಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್, ಡಾ. ಯಜ್ಙೇಶ್ ಶರ್ಮ, ನಾಗರಾಜ್, ಪ್ರಕಾಶ
ಶೈಣೈ, ಬಾಲಕೃಷ್ಣ ಮುದ್ದೋಡಿ ಹಾಗೂ ಇತರರು ಉಪಸ್ಥಿತರಿದ್ದರು.
3.
ನಮ್ಮ ಅಸೋಸಿಯೇಶನ್ ವೈವಿಧ್ಯತೆಯಲ್ಲಿ ಏಕತೆ – ಇದರಲ್ಲಿ ನಂಬಿಕೆ ಇಟ್ಟ
ಸಂಸ್ಥೆ. ತಾರೀಕು 9-10-2019ರಲ್ಲಿ ದಾಂಡಿಯಾ ನೃತ್ಯ ವೈಭವ ಕಾರ್ಯಕ್ರಮವನ್ನು ನಮ್ಮ ಸದಸ್ಯರಾದ ಶ್ರೀಮತಿ
ಮುಕ್ತ ಅವರ ನಿರ್ದೇಶನದಲ್ಲಿ ಜರಗಿಸಿಲಾಯಿತು. ಇದರಲ್ಲಿ Ladies Wingನ ಎಲ್ಲಾ ಸದಸ್ಯರು ಬಾಗವಹಿಸಿದ್ದರು.
ಈ ನೃತ್ಯ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು.
4.
ನವೆಂಬರ್ 3, 2019ರಂದು ಸಂಸ್ಥೆಯ Executive Committee
Meeting ಅದ್ಯಕ್ಷರಾದ ಡಾ. ಮಯ್ಯರ ಮನೆಯಲ್ಲಿ ಜರಗಿತು. ಇದರಲ್ಲಿ ದಾರಿ ದೀಪ, Rain Water
Channel, ಮೆಂಬರ್‌ಶಿಪ್ ಪೀ, Health Camp, Sign Boards ಗಳ ಬಗೆಗೆ ಚರ್ಚಿಸಿದ್ದಲ್ಲದೆ, ಹಲವಾರು
ಸಮಿತಿಗಳನ್ನು ರಚಿಸಲಾಯಿತು.
5.
29-12-2019ರಂದು ನಮ್ಮ EC Meeting ಶ್ರೀ ಹೆಚ್. ಎನ್ ಎಸ್ ರಾಯರ
ಮನೆಯಲ್ಲಿ ಜರಗಿತು. Ladies Memberನ್ನು ಸೇರಿಸುವ ಬಗೆಗೆ ಚರ್ಚೆ ನಡೆಯಿತು.
6.
ದಿನಾಂಕ 13 ಜನವರಿ 2020 ರಂದು ಬೆಳಿಗ್ಗೆ 9.00 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ಮಣಿಪಾಲ ಡಾ. ಟಿಎಂಎ ಪೈ ಕಾಲೇಜಿನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ
ಸಂಸ್ಥೆ ಬೆಂಗಳೂರು,
ಭಾರತೀಯ ವಿಕಾಸ ಟ್ರಸ್ಟ್, ಉಡುಪಿ ನಗರಸಭೆ, ಈಶ್ವರನಗರ ರೆಸಿಡೆನ್ಸಿಯಲ್ ವೆಲ್ಫೇರ್ ಅಸೋಸಿಯೇಷನ್ ಮತ್ತು
ಸ್ನೇಹಸಂಗಮ ಈಶ್ವರನಗರ ಮಣಿಪಾಲ, ರೊಟರಿ ಕ್ಲಬ್ ಉಡುಪಿ ರಾಯಲ್, ರೊಟರಿ ಕ್ಲಬ್ ಉಡುಪಿ ಮಣಿಪಾಲ, ಸಾಹಸ್
ಉಡುಪಿ, ಸಹಕಾರ ಭಾರತಿ ಉಡುಪಿ, ರಾಷ್ಟ್ರೀಯ ಸೇವಾ ಯೋಜನೆ ಹಾಗು ಡಾ. ಟಿಎಂಎ ಪೈ ಪಾಲಿಟೆಕ್ಣಿಕ್
ಕಾಲೇಜಿನ ಸಹಯೋಗದಲ್ಲಿ ಮಳೆ ನೀರು ಕೊಯ್ಲು, ಘನ ತ್ಯಾಜ್ಯ ವಿಲೇವಾರಿ, ಸೌರ ವಿದ್ಯುತ್ ಮಾಹಿತಿ ಕಾರ್ಯಗಾರಗಳನ್ನು
ಆಯೋಜಿಸಲಾಗಿತ್ತು. ಕಾರ್ಯಾಗಾರಕ್ಕೆ ಬೆಂಗಳೂರಿನಿಂದ ಸಂಪನ್ಮೂಲ ವ್ಯಕ್ತಿಗಳು ಅಗಮಿಸಿದ್ದು, ಕೌನ್ಸಿಲರ್
ಮಂಜುನಾಥ್ ನೇತ್ರತ್ವದಲ್ಲಿ ಕಾರ್ಯಕ್ರಮ ಜರಗಿತು.
7.
ತಾರೀಕು 13-02-2019ರಂದು, ಈಶ್ವರನಗರ ವಾರ್ಡಿನ ಕೌನ್ಸಿಲರ್ ಆಗಿರುವ
ಶ್ರೀ ಮಂಜುನಾಥ್ ಅವರ ನೇತೃತ್ವದಲ್ಲಿ ಸ್ವಚ್ಛತೆಯ ಬಗೆಗೆ ವಿಶೇಷವಾದ ಆಬಿಯಾನವನ್ನು ಆರಂಬಿಸಲಾಯಿತು.
ಅಸೋಸಿಯೇಷನ್ ಅದರ ಅದ್ಯಕ್ಚರಾದ ಡಾ. ಸುರೇಶರಮಣ ಮಯ್ಯ ಅವರ ಮನೆಯಲ್ಲಿ Pipe Composting ನ್ನು ಆರಂಬಿಸಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳು ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಈ ಶ್ವರನಗರದ ಹಲವಾರು ಸದಸ್ಯರು ಭಾಗವಹಿಸಿದ್ದರು.
8.
ತಾರೀಕು 15-02-2020ರಂದು ಅಸೋಸಿಯೇಶನ್‌ನ ಕಾರ್ಯದರ್ಶಿಯಾದ ಶ್ರೀ ನಾಗರಾಜ್
ಕೆ ಅವರ ಮನೆಯಲ್ಲಿ ಜರಗಿದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈಶ್ವರ ನಗರದ ಸ್ವಚ್ಛತೆ, ಶ್ಯಾಮ್ ರೆಸಿಡೆನ್ಸಿಯ
ಸುತ್ತುಮುತ್ತಲು ಇರುವ ಕಸಗಳನ್ನು ವಿಲೆವಾರಿ ಮಾಡುವ ಬಗೆಗೆ ಹಾಗೂ ಇತರ ವಿಷಯಗಳ ಬಗೆಗೆ ವಿವರವಾಗಿ
ಚರ್ಚಿಸಲಾಯಿತು.
9. ತಾರೀಕು ಅಕ್ಟೋಬರ್
3, 2020ರಂದು ಜರಗಿದ ಈಶ್ವರ ನಗರ ರೆಸಿಡೆನ್ಸಿಯಲ್ ವೆಲ್ಪಾರ್ ಅಸೋಸಿಯೇಶನ್, ಈಶ್ವರ ನಗರ, ಮಣಿಪಾಲ
ಇದರ ಓನ್‌ಲೈನ್ Executive Committee Meetingನಲ್ಲಿ ಹಲವಾರು ವಿಷಯಗಳ ಬಗೆಗೆ ಚರ್ಚೆ ನಡೆಸಲಾಗಿದ್ದು,
ಈಶ್ವರನಗರ ವಾರ್ಡ್ ಇದರ ಕೌನ್ಸಿಲರ್ ಶ್ರೀ ಮಂಜುನಾಥ್ ಅವರು ಮಾತನಾಡುತ್ತಾ, ಈಶ್ವರನಗರ ವಾರ್ಡಿನ
ಸದಸ್ಯರು ಅನುಭವಿಸುತ್ತಿರುವ ನೀರಿನ ಸಮಸ್ಯೆ, ಅದರ ಪರಿಹಾರ, ಸಮಯ, ಮುನಿಸಿಪಾಲಿಟಿಯ ಮುಂದಿನ ಯೋಜನೆ
ಬಗೆಗೆ ಬೆಳಕು ಚೆಲ್ಲಿದರು. ಅಲ್ಲದೆ, ಮಾನ್ಯ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮುನಿಸಿಪಾಲಿಟಿ
ಅಧಿಕಾರಿಗಳೊಂದಿಗೆ ಜರಗಿದ ಸಭೆ, ಅದರಲಿ ಸ್ಥಳೀಯ ಸಂಸ್ಥೆ ಹಾಗೂ ಈಶ್ವರ ನಗಾರದ ಸಮಸ್ಯೆಗಳನ್ನು ಪರಿಹರಿಸುವ
ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಬಗೆಗೆ ವಿವರ ನೀಡಿದರು. ಅಲ್ಲದೆ, ದಾರಿ ದೀಪಗಳ ನಿರ್ವಹಣೆ, ಅದರ
ಸಮರ್ಪಕ ನಿರ್ವಹಣೆಯನ್ನು ಮಾಡುವ ಮುಂದಿನ ಯೋಜನೆಗಳ ಬಗೆಗೆ ವಿವರಿಸಿದರು. ಹಾಗೇ, ಪ್ರತಿ ಗುರುವಾರ
ಈಶ್ವರನಗರದ ವಾರ್ಡಿನಲ್ಲಿ ಆಗುವ Grass Cutting, ಇದರ ಬಗ್ಗೆ ಮುನಿಸಿಪಾಲಿಟಿ ನೇಮಕ ಮಾಡಿದ 5 ಜನರ
ಟೀಮ್, ಅದರ ಉಸ್ತುವಾರಿ ಬಗೆಗೆ ಕೈಗೊಂಡ ಕ್ರಮಗಳ ಬಗೆಗೆ ವಿವರ ನೀಡಿದರು. ಮಣಿಪಾಲ-ಈಶ್ವರನಗರ ಬಸ್ಸು
ನಿಲ್ದಾಣದಿಂದ ಮಣಿಪಾಲ ಡೇರಿ ರಸ್ತೆಗೆ ಬರಲು ರಸ್ತೆ ದಾಟಲು ಕಬ್ಬಿಣದ ಕೊಳವೆ ಕಳಚಿ ಅನುಕೂಲತೆ ಒದಗಿಸುವುದು ಒಂದು ಸಮಸ್ಯೆಯಾಗದ್ದು,
ಇದರಿಂದ ಹಿರಿಯ ನಾಗರೀಕರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಇದರ ಬಗೆಗೆ ನಮ್ಮ ಕೌನ್ಸಿಲರಿಂದ
ಹೆಚ್ಚಿನ ನಿರೀಕ್ಚೆಯಿದೆ.
10. ನವೆಂಬರ್ 2,
2020ರಂದು ಈಶ್ವರನಗರ ನಿವಾಸಿಗಳು ಹಾಗೂ ಇತರರನ್ನುದ್ದೇಶಿಸಿ ಅಸೋಸಿಯೇಶನ್‌ನ ಹಿರಿಯ ಸದಸ್ಯರೂ ಹಾಗೂ
ಸಲಹೆಗಾರರಾದ ಡಾ. ಗೌರಿ ಹೆಚ್.ಜೆ, ಕೋವಿಡ್ -19: Myths and Facts ಎಂಬ ವಷಯದ ಕುರಿತು ವಿಷದವಾಗಿ
ಬೆಳಕು ಚೆಲ್ಲಿದರು. ಡಾ. ಶೋಭಾ ಕಾಮತ್ ಅವರು ಡಾ. ಗೌರಿಯವರನ್ನು ಪರಿಚಯಿಸಿದರೆ, ಅಸೋಸಿಯೇ಼ಷನ್
ಕಾರ್ಯದೃಶಿಯಾಗಿರುವ ಶ್ರೀ ನಾಗರಾಜ್ ವಂದಿಸಿದರು. ಈ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿ ಬಂತು.
ಉಡುಪಿ-ಮಣಿಪಾಲ ರೋಟರಿಯ ಹಲವಾರು ಮಂದಿ ಗಣ್ಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮಕ್ಕೆ
ಹೆಚ್ಚಿನ ಮೆರುಗನ್ನು ನೀಡಿತ್ತು.
11. ತಾರೀಕು
23-11-2020ರಂದು ಅಸೋಸಿಯೇಶನ್ ಇದರ ಹಿರಿಯ ಸದಸ್ಯರಾದ ಶ್ರಿ ರಾಜವರ್ಮ ಅರಿಗರಿಂದ ಹಾಗು ಉಡುಪಿಯ
ಯುಟಿಐ ಮ್ಯೂಚವಲ್ ಪಂಡ್ ಇದರ Consultant ಆಗಿರುವ
ಶ್ರೀ ವಾಲ್ಟರ್ Cyril Pinto ಅವರಿಂದ “Financial Awareness ಎಂಬ ವಿಷಯದ ಬಗೆಗೆ ವಿಶೇಷ ಕಾರ್ಯಕ್ರಮ
ಜರಗಿತು.
12. ತಾರೀಕು
20-12-2020ರಂದು ಜರಗಿದ ವಿಷೇಶವಾದ ಸ್ವಚ್ಛತಾ ಅಭೀಯಾನದಲ್ಲಿ
ಹಲವಾರು ಸದಸ್ಯರು ಬಾಗವಹಿಸಿದ್ದರು. ಅಂದು ಕುಡಿದು ಎಸೆದು ಹೋದ ಸುಮಾರು 500 ಬಾಟಲಿಗಳನ್ನು ಹೆಕ್ಕಿ
ಸಂಗ್ರಹಿಸಿ ವಲೇವಾರಿ ಮಾಡುವ ಮೂಲಕ ಸ್ವಚ್ಛತಾ ಅಭಿಯಾನ ನಡೆಯಿತು. ಇದರಲ್ಲಿ ಮಾಧವ ರಾವ್ ಶ್ಯಾನಭಾಗ್, ರಾಜವರ್ಮ ಅರಿಗ, ಡಾ.
ಬಾಲಚಂದ್ರ, ಪ್ರಕಾಶ ಶ್ಯೆಣ್ಯೆ, ಡಾ ಲಾವಣ್ಯ, ಡಾ. ವಿರೂಪಾಕ್ಚ ದೇವರಮನೆ, ಡಾ. ವೀಣಾ, ಜಾನ್ ಪಿಲಿಪ್
ಹಾಗೂ ಮಂಜುನಾಥ ಮತ್ತು ಇತರರು ಭಾಗವಹಿಸಿದ್ದರು.
ಇದು ಕೋವಿಡ್-19ರ ನಡುವೆ ನಮ್ಮ ಅಸ್ತಿತ್ವವನ್ನು
ಮುಂದುವರಿಸುವ ಪ್ರಯತ್ನ. ನಿರೀಕ್ಷಿಸಿದ ಮಟ್ಟಕ್ಕೆ ತಲಪಲಾಗಲಿಲ್ಲ.
ಖಜಾಂಚಿ ಡಾ. ರಾಘವೇಂದ್ರ ಕಾಮತ್ ಅವರು 2019-2020ರ ಲೆಕ್ಕ ಪತ್ರಗಳನ್ನು ಸಭೆಗೆ
ಮಂಡಿಸಿ ಸಭೆಯ ಅನುಮತಿ ಪಡೆದರು. ನಂತರ ನಡೆದ ಚರ್ಚೆಗಳಲ್ಲಿ ಶ್ರೀ ರಾಜವರ್ಮ, ಡಾ. ಯಜ್ನೇಶ ಶರ್ಮ,
ಡಾ ಬಾಲಚಂದ್ರ, ಡಾ. ಶಿವಪ್ರಸಾದ, ಪ್ರೊ. ಮಾಧವ ಶಾನುಭಾಗ್ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.
ಸ್ಥಳೀಯ ಕೌನ್ಸಿಲರ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಮಂಜುನಾಥ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ
ಸ್ಥಳೀಯ ಸಂಸ್ಥೆ ತೆಗೆದುಕೊಂಡ ಕಾರ್ಯಕ್ರಮಗಳ ಬಗೆಗೆ ವಿಷದವಾಗಿ ವಿವರಿಸಿದರು. ಕೊನೆಯಲ್ಲಿ ಜರಗಿದ
ಓನ್‌ಲೈನ್ ಮನರಂಜನಾ ಕಾರ್ಯಕ್ರಮದಲ್ಲಿ ಶರಣ್ಯ, ಪ್ರತೀಕ್, ದೀಪಕ್, ದೀಪ್ತಿ ಹಾಗೂ
ಇತರ ಸದಸ್ಯರ ನೃತ್ಯ ಹಾಗೂ ಹಾಡುಗಳನ್ನು ಬಿತ್ತರಿಸಲಾಯಿತು. ಕಾರ್ಯದರ್ಶಿ ಶ್ರೀ ನಾಗರಾಜ್ ಕೆ ಅವರಿಂದ
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಈ ಎಲ್ಲಾ ವಿವರಗಳನ್ನು ಹಾಗೂ ಸರ್ವ ಸಾಧಾರಣ ಸಭೆಯ ಸಂಪೂರ್ಣ ವೀಡಿಯೋವನ್ನು ಈ ಕೆಳಗಿನ ವಿಳಾಸದಲ್ಲಿ
ಅಸೋಸಿಯೇಶನ್ ಇದರ (Blog) ಜಾಲತಾಣದಲ್ಲಿ ಹಾಕಲಾಗಿದೆ.
http://eshwarnagar.blogspot.com/