Thursday, 13 February 2020

ಮಣಿಪಾಲದಲ್ಲಿ ಪೈಪ್‌ ಕಾಂಪೋಸ್ಟಿಂಗ್‌ ಅಭಿಯಾನ

ನಗರ ಸ್ವಚ್ಛತೆಯ ಬಗ್ಗೆ ವಿಶೇಷ ಯೋಜನೆಗಳನ್ನು ಉಡುಪಿ ನಗರಸಭೆಯು ಸಾಹಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿವೆ. ಈ ಬಗ್ಗೆ ನಮ್ಮ  ವಾರ್ಡಿನ  ಮಾಹಿತಿ ಕರ‍್ಯಗಾರಗಳನ್ನು ಆಯೋಜಿಸಿದ್ದು ಬೆಂಗಳೂರಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟಿದ್ದಾರೆ.

ಈ ದಿಸೆಯಲ್ಲಿ, ಈಶ್ವರನಗರ ವಾರ್ಡಿನ ಕೌನ್ಸಿಲರ್ ಆಗಿರುವ ಶ್ರೀ ಮಂಜುನಾಥ ಅವರ ನೇತ್ರತ್ವದಲ್ಲಿ ಗುರುವಾರ ದಿನಾಂಕ ೧೩.೨.೨೦೧೯ ರಂದು ಸ್ವಚ್ಛತೆಯ ಬಗ್ಗೆ ಈಶ್ವರನಗರ ವಾರ್ಡಿನಲ್ಲಿ ವಿಶೇಷವಾದ ಅಭಿಯಾನವನ್ನು ಆರಂಭಿಸಿದ್ದು ವಾರ್ಡಿನ ಎಲ್ಲಾ ಮನೆಗಳಲಿ ಆರಂಬಿಸುವ ಯೋಜನೆಯನ್ನು ಹೊಂದಿದ್ದೇವೆ.  ಮುಂದಿನ ವಾರ ನಮ್ಮ ವಾರ್ಡಿನಲ್ಲಿ ಆಸಕ್ತ ಮನೆಗಳಲ್ಲಿ ಪೈಪ್ ಕಂಪೋಸಿಂಗ್ ಅಳವಡಿಸುವ ಯೋಜನೆಯನ್ನು ಹಾಕಿ ಕೊಂಡಿದ್ದು ನಾವು ಅದನ್ನು ಅಳವಡಿಸುವ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ  ಉಚಿತವಾಗಿ ಒದಗಿಸುತಿದ್ದೇವೆ. ಪ್ರತೀ ಮನೆಯಲ್ಲಿ ಎರಡು ಪೈಪ್ ಗಳನ್ನು  ಅಳವಡಿಸುತಿದ್ದು ಅದರ ಮೌಲ್ಯವನ್ನು ಮಾತ್ರ ನಿವಾಸಿಗಳಿಂದ ಅಪೇಕ್ಷಿಸುತ್ತಿದ್ದೇವೆ. ೬ ಇಂಚು ವ್ಯಾಸದ ಎರಡು ಪೈಪ್ ನ ಬೆಲೆ ಅಂದಾಜು ೭೦೦   ಅಗಲಿದ್ದು ಹಾಗು ೮ ಇಂಚು ವ್ಯಾಸದ ಪೈಪ್ ನ ಬೆಲೆ ಅಂದಾಜು ೧೩೦೦ ಆಗಲಿದೆ. ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಮೇಲೆ ಪೈಪ್ ಗಳ ವ್ಯಾಸ ಅವಲಂಬಿತವಾಗಿರುತ್ತದೆ. ಈಗಾಗಲೇ ಸುಮಾರು ಹತ್ತಕ್ಕೂ ಹೆಚ್ಚು ನಿವಾಸಿಗಳು ನೋಂದಣಿ ಮಾಡಿಕೊಂಡಿದ್ದು ಆಸಕ್ತರು ಆದಷ್ಟು ಬೇಗ  ವಾಟ್ಸಾಪ್ ಮುಖಾಂತರ ನೋಂದಾಯಿಸ ಬೇಕಾಗಿ ವಿನಂತಿ. ಪೈಪ್ ಕಂಪೋಸಿಂಗ್ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. 

ಮಾನ್ಯ ಜಿಲ್ಲಾಧಿಕಾರಿಗಳು ಈಶ್ವರನಗರ ರೆಸಿಡೆನ್ಸಿಯಲ್‌ ಅಸೋಸಿಯೇಷನ್‌ ಇದರ ಅದ್ಯಕ್ಷರಾದ ಡಾ. ಸುರೇಶರಮಣ ಮಯ್ಯ ಅವರ ಮನೆಯಲ್ಲಿ ಈ ಆಬಿಯಾನವನ್ನು ಉದ್ಘಾಟಿಸಿದರು. 

ಜಿಲ್ಲಾಧಿಕಾರಿಗಳಾದ ಶ್ರೀ ಜಿ. ಜಗದೀಶ್‌ ಅವರು ಮಾತಾಡುತ್ತಾ, ಸ್ವಚ್ಛತೆಯ ದೃಷ್ಠಿಯಲ್ಲಿ ಉಡುಪಿ ಜಿಲ್ಲೆಗೆ ವಿಷೇ಼ಷ ಸ್ಥಾನಮಾನವಿದೆ.ಇದಕ್ಕೆ ಇಲ್ಲಿನ ಜನರೇ ಕಾರಣ. ಆವರ ತೊಡಗುವಿಕೆ, ಸರಕಾರೇತರ ಸಂಘ, ಸರಕಾರ - ಇವರುಗಳು ಸಂಘಟಿಸುವ ಕಾರ್ಯಕ್ರಮಗಳಿಗೆ ಪೂರಕವಾದ ಜನಸ್ಪಂದನೆ-ಈ ಎಲ್ಲಾ ಕಾರಣಗಳಿಂದಾಗಿ ಈ ಜಿಲ್ಲೆ ಹೆಸರುಗಳಿಸಿದೆ. ನಗರಗಳು ಬೆಳೆದಂತೆ ಸ್ವಚ್ಛತೆಯ ಸಮಸ್ಯೆಗಳು ಹೆಚ್ಛಾಗುತ್ತಿರುತ್ತದೆ. ನಗರಗಳ ಸ್ವಚ್ಛತೆ ಹಾಳಾಗುತ್ತಿರುತ್ತದೆ. ಹಿಂದೆ ನಮ್ಹ ಹಳ್ಳಿಗಳು ಬಹಳ ಸ್ಚಚ್ಛವಾಗಿತ್ತು. ನಗರಗಳು ಬೆಳೆದಂತೆ ಹೊಸತರದ ಸ್ವಚ್ಛತೆಯ ಸಮಸ್ಯೆಗಳು ಉದ್ಭವವಾಗಿದೆ. ಈ ಕಸದ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಿ, ಸೋತು ಮತ್ತೆ ಮನೆ ಹಂತದಲ್ಲಿ ಕಸದ ನಿರ್ವಹಣೆ ಮಾಡುವ ಬಗೆಗೆ ಚಾಲನೆ ಕೊಡುತ್ತಾ ಇದ್ದೇವೆ. ಇಲ್ಲಿನ ಸಮೀಪದ ಅಲೆವೂರಿನಲ್ಲಿ ನಾನು ಪ್ರೊಬೆಷನರಿ ಆಗಿದ್ದಾಗ ಲಾಠಿ ಹಾಗೂ ಹೆಲ್ಮೆಟ್‌ ಹಾಕಿಕೊಂಡು, ಸ್ಠಾಟ್‌ ಮಾಡಿ, ಯಾರು ಏನು ಮಾಡುತ್ತಾರೆ ನೋಡುವ ಎಂದಿದ್ದೆ. ಆದರೆ ಈವತ್ತು ಅಲ್ಲಿಗೆ ಹೋದಾಗ ನನ್ನ ಮನಸ್ಸು ಕಲಕುತ್ತದೆ, ನಾನು ಹಾಗೆ ಮಾಡಬಾರದಿತ್ತು - ಎಂದು ಅನ್ನಿಸಿದೆ. ಅಷ್ಟು ಕೆಟ್ಟದಾಗಿದೆ. ಜನರ ಜೀವನವೇ ದುಸ್ತರವಾಗಿದೆ. ಇದೇ ರೀತಿ ನಗರ ಬೆಳೆದಂತೆ ದೊಡ್ಡ ದೊಡ್ಡ ಕಸದ ಬೆಟ್ಟಗಳನ್ನು ಸೃಷ್ಠಿ ಮಾಡುತ್ತಿದ್ದೇವೆ. ನಾವು ಆದಷ್ಟು ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸುವಂತದ್ದು, ಹಸಿ ಕಸವನ್ನು ನಾವೇ ನಿರ್ವಹಣೆ ಮಾಡುವುದು, ಕಂಪೋಸ್ಟ್‌ ಮಾಡುವುದರ ಮುಖಾಂತರ ನಮ್ಮ ಗಿಡಗಳಿಗೆ ಅದೇ ಗೊಬ್ಬರವನ್ನು ಬಳಸುವಂತಾದರೆ ನಗರಸಭೆಯ ಮೇಲೆ ಇರುವ ಹೊರೆಯನ್ನು ನಾವು ಕಡಿಮೆ ಮಾಡಬಹುದು ಹಾಗೂ ನಮ್ಮ ಕಸವನ್ನು ನಾವೇ ನಿರ್ವಹಣೆ ಮಾಡಬಹುದು. ನಾನು ಡಿಸಿಯಾಗಿ ಹೇಳುವುದೊಂದು ಮಾಡುವುದು ಇನ್ನೊಂದು - ಎಂದು ಆಗಬಾರದು, ಆದ್ದರಿಂದ ನನ್ನ ಮನೆಯಲ್ಲಿ ತಾಜ್ಯ ನಿರ್ವಣೆ ವ್ಯವಸ್ಥೆಯನ್ನು ಅಳವಡಿಸಿದ್ದೇನೆ. ನನ್ನ ಮನೆಯ ಹಸಿ ಕಸವನ್ನು ನಾನು ಮುನಿಸಿಪಾಲಿಟಿಗೆ ಕೊಡುವುದಿಲ್ಲ. ಒಣಕಸವನ್ನು ಹಾಕಿ ಕೊಡಲು ಒಂದು ಚೀಲವನ್ನು ಕೊಟ್ಟಿದ್ದಾರೆ.ಹದಿನ್ಯೆದು ದಿನಕ್ಕೊಮ್ಮೆ ಅದನ್ನು ಕೊಡುತ್ತೇನೆ. ಅಲ್ಲದೆ ನಾನು ಪ್ಲಾಸ್ಟಿಕ್‌ ಬಳಸುವುದು ತುಂಬ ಕಡಿಮೆ. ಆದ್ದರಿಂದ ಒಣ ಕಸವು ತುಂಬ ಕಡಿಮೆ. ಅಸ್ಟುಮಟ್ಟಿಗೆ ಪ್ರತಿಯೊಬ್ಬರ ಮನೆಯಲ್ಲಿ ಎಲ್ಲರೂ ಪ್ರಯತ್ನ ಮಾಡಿದರೆ ನಗರಸಭೆಯ ಜವಾಬ್ದಾರಿ ಕಡಿಮೆಯಾಗುತ್ತದೆ. ನಗರಸಭೆಯ ಮೇಲಿನ ಹೊರೆ ಕಡಿಮೆಯಾಗುತ್ತದೆ. ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಈಶ್ವರನಗರದಲ್ಲಿ ಪ್ರಯತ್ನ ಆರಂಭವಾಗಿದೆ. ಅದು ನಿಜಕ್ಕೂ ಪ್ರಶಂಸನೀಯ, ಆ ನಿಟ್ಟಿನಲ್ಲಿ ಸುರೇಶರಮಣ ಮಯ್ಯ ಅವರ ಮನೆಯಲ್ಲಿ ಈ ಕಾರ್ಯಕ್ರಮ ಆರಂಭಿಸಿದ್ದು ಶ್ಲಾಘನೀಯ, ಇದು ನಿಜಕ್ಕೂ ಸಂತೋಷವನ್ನು ತಂದಿದೆ. ನಾವು ಮಾದರಿಯಾಗಿದ್ದರೆ ಇನ್ನೊಬ್ಬರಿಗೆ ಹೇಳಲಿಕ್ಕಾಗುತ್ತದೆ. ಆ ನಿಟ್ಟಿನಲ್ಲಿ ಮಯ್ಯರು ಹಾಗೂ ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅವರ ಮನೆಯಿಂದ ಈ ಮಹತ್ವದ ಕಲಸ ನಗರಸಭಾ ಸದಸ್ಯರಾದ ಶ್ರೀ ಮಂಜುನಾಥ್‌ ಅವರ ಪ್ರಯತ್ನದಿಂದ ಆರಂಭವಾಗಿದೆ. ಇದು ಉಡುಪಿ ನಗರಸಭಾ ವ್ಯಾಪ್ತಿಯ ಪ್ರತಿಯೊಂದು ಮನೆಯಲ್ಲಿ ಆರಂಭವಾಗಲಿ. ಇಲ್ಲಿನ ನಗರಸಭಾ ಸದಸ್ಯರು ತೆಗೆದುಕೊಂಡ ಮುತುವರ್ಜಿಯನ್ನು ನಗರಸಭೆಯ ಎಲ್ಲಾ ಸದಸ್ಯರು ತೆಗೆದುಕೊಳ್ಳ ಬೇಕು. ಈ ಸ್ತುತ್ಯರ್ಹ ಕಾರ್ಯಕ್ಕೆ ಸಬ್ಸಿಡಿ ಕೊಡುವ ಬಗೆಗೆ ತಿರ್ಮಾನವಾಗಿದೆ, ಯಾರು ಇದನ್ನು ಅಳವಡಿಸುತ್ತಾರೋ, ಅವರಿಗೆ ಸುಮಾರು ಶೇಕಡಾ ಐವತ್ತರಷ್ಟು ಸಬ್ಸಿಡಿ ಕೊಡಲಾಗುವುದು. ಆದ್ದರಿಂದ ಉಡುಪಿಯ ಪ್ರತಿ ಮನೆಯಲ್ಲಿ ಈ ರೀತಿಯ ಪೈಪ್‌ ಕಾಂಪೋಸ್ಟಿಂಗ್‌ ಅಳವಡಿಸಿದರೆ, ಉಡುಪಿ ನಗರ ದೇಶದಲ್ಲಿಯೇ ಮಾದರಿ ನಗರವಾಗುವುದರಲ್ಲಿ  ಸಂಶಯವಿಲ್ಲ. ಮೊನ್ನೆ ವಿಧಾನಪರಿಷತ್ತಿನ ಎಂಟು ಜನ ಸದಸ್ಯರು ನಮ್ಮ ಸಗರಕ್ಕೆ ಬಂದಿದ್ದರು. ಅವರು ನಗರದ ಎಲ್ಲಾ ಕಡೆ ಓಡಾಡಿದ ನಂತರ ಅವರ ಉದ್ಘಾರ ಹೀಗಿತ್ತು - ಉಡುಪಿ ನಗರ ಎಷ್ಠು ಚಂದ ಇದೆ, ಎಷ್ಟು ಕ್ಲೀನ್‌ ಇದೆ, ಇಷ್ಟಕ್ಕೆ ನಾವು ಸಂತಸಪಡುವುದು ಬೇಡ, ಇಡೀ ದೇಶದಲ್ಲಿ ಇದನ್ನು ಮಾದರಿ ನಗರವಾಗಿ ಮಾಡಬೇಕು, ಚಿಕ್ಕ ನಗರದಲ್ಲಿ ಇದೊಂದು ಮಾದರಿ ನಗರವಾಗಿ ಮಾಡಬೇಕೆಂಬುದು ನನ್ನ ಕನಸು, ನನ್ನ ಕನಸನ್ನು ಸಾಕಾರಗೋಳಿಸಲು ಎಲ್ಲರೂ ಕೈಜೋಡಿಸಬೇಕು, ಇಂತಹ ಒಂದು ಪ್ರಯತ್ನವನ್ನು ಮಾಡುತ್ತಿರುವ ಮಣಿಪಾಲದ ಈಶ್ವರನಗರದ ನಗರಸಭಾ ಸದಸ್ಯರಾದ ಮಂಜುನಾಥ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 

ತಾರೀಕು ೧೩-೦೨-೨೦೨೦ರಂದು ಮಣಿಪಾಲ ಈಶ್ವರನಗರ ವಾರ್ಡನ ಈಶ್ವರನಗರ ರೆಸಿಡೆನ್ಷಿಯಲ್‌ ವೆಲ್ಪಾರ್‌ ಅಸೋಸಿಯೇಶನ್‌ ಇದರ ಅದ್ಯಕ್ಷರಾದ ಡಾ. ಸುರೇಶರಮಣ ಮಯ್ಯ ಇವರ ಮನೆಯಲ್ಲಿ ಜರಗಿದ ಪೈಪ್‌ ಕಾಂಪೋಸ್ಟಿಂಗ್‌ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾನ್ಯ ಜಿಲ್ಲಾಧಿಕಾರಿಗಳು ಮಾತನಾಡುತ್ತಿದ್ದರು. 

ಈಶ್ವರನಗರ ರೆಸಿಡೆನ್ಷಿಯಲ್‌ ವೆಲ್ಪಾರ್‌ ಅಸೋಸಿಯೇಶನ್‌, ಸ್ನೇಹ ಸಂಗಮ, ರೋಟರಿ ಸಂಸ್ಥೆಗಳಾದ ಉಡುಪಿ ರಾಯಲ್‌, ಉಡುಪಿ ಮಣಿಪಾಲ, ಈಶ್ವರನಗರ ವಾರ್ಡ್‌ ಸಮಿತಿ, ಉಡುಪಿ ನಗರ ಸಭೆ, ಸಾಹಸ್‌ ಉಡುಪಿ, ಸಹಕಾರ ಭಾರತಿ ಇವರೆಲ್ಲರ ಸಹಕಾರದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರು ನೂರು ಮನೆಗಳಿಗೆ ಹಸಿ ತ್ಯಾಜ್ಯ ವಿಲೇವಾರಿ ಘಟಕ ಪೈಪ್‌ ಕಾಂಪೋಸ್ಟಿಂಗ್‌ನ್ನು ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈಶ್ವರನಗರ ವಾರ್ಡಿನ ಕೌನ್ಸಿಲರ್‌ ಆಗಿರುವ ಶ್ರೀ ಮಂಜುನಾಥ ಅವರು ಸ್ವಾಗತಿಸಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಹೇಳಿದರು. 

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಮಂಜುನಾಥ್‌ ಮಣಿಪಾಲ, ಸಗರಸಭೆಯ ಆರೋಗ್ಯಾಧಿಕಾರಿ ಕರಣಾಕರ್‌, ಸಹಾಸ್‌ ಸಂಸ್ಥೆಯ ಜಾನ ರತ್ನಾಕರ್ ಸಂಘಟಿಸಿದ ಈ ವಿಶೇಷ ಅಭಿಯಾನದಲ್ಲಿ ಡಾ. ಸುರೇಶರಮಣ ಮಯ್ಯ, ಹರೀಶ್‌ ಜಿ. ಕಲ್ಮಾಡಿ, ಡಾ.ಹೆಚ್.‌ ಜಿ. ಗೌರಿ, ಎಚ್.‌ ಎನ್.‌ ಎಸ್.‌ ರಾವ್‌, ಡಾ. ಯಜ್ಞೇಶ್‌ ಶರ್ಮ,ರಾಜವರ್ಮ ಅರಿಗ, ಡಾ. ಶ್ರೀಮತಿ ಎಸ್.‌ ಮಯ್ಯ, ಶ್ರೀನಿವಾಸ ರಾವ್‌, ಡಾ. ರಾಘವೇಂದ್ರ ಕಾಮತ್, ನಾಗರಾಜ್‌ ಕೆ, ಪ್ರೊ. ಹೆಚ್.‌ ಕೆ. ವಿ. ರಾವ್‌, ದಿನೇಶ್‌ ಹೆಗ್ಡೆ ಅತ್ರಾಡಿ, ಗಿರೀಶ್‌ ಭೋವಿ, ಸುಧಾಕರ್‌ ನಾಯಕ್‌, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್‌, ಸತೀಶ್‌ ಸಾಲಿಯಾನ್‌, ಸಾಲಿಕೇರಿ ಬ್ರಹ್ಮಲಿಂಗ ದುರ್ಗಾಪರಮೇಶ್ವರಿ ದೇಗುಲದ ಆಡಳಿತ ಮುಕ್ತೇಶ್ವರ ಬಾಲಕ್ರಷ್ಣ ಶೆಟ್ಟಿಗಾರ್‌ ಹಾಗೂ ಹಲವಾರು ಪೌರ ಕಾರ್ಮಿಕರು ಹಾಜರಿದ್ದರು. ನಂತರ ಜಿಲ್ಲಾಧಿಕಾರಿಯೊಂದಿಗೆ ಬದಲಾದ ಸ್ವಚ್ಛತಾ ವ್ಯಾನ್‌ನ ಲಭ್ಯತೆಯ ಬಗೆಗೆ ಚರ್ಚೆ ನಡೆಯಿತು. 



















































For more information about Pipe Composting: 



Speach by DC



🕊️ In Loving Memory of Sri Srinivas Rao – The Guiding Light of Eshwar Nagar

It was a deeply saddening day for all of us in Eshwar Nagar . We received the shocking news that Sri Srinivas Rao , the Senior Advisor of t...