ಈಶ್ವರನಗರ ರೆಸಿಡೆನ್ಸಿಯಲ್ ವೆಲ್ಪಾರ್ ಅಸೋಸಿಯೇಶನ್ (ರಿ) ಇದರ ಸರ್ವ ಸಾಧಾರಣ ಸಭೆ
ಈಶ್ವರನಗರ: ಸೆಪ್ಟಂಬರ್ 17 2022ರಂದು
ಸಂಜೆ ಈಶ್ವರನಗರ ರೆಸಿಡೆನ್ಸಿಯಲ್ ಅಸೋಸಿಯೇಶನ್ ಇದರ 16 ನೇ ಸರ್ವ ಸಾಧಾರಣ ಸಭೆ ಮಣಿಪಾಲದ ವೈಶ್ಣವಿ
ಸಭಾ ಭವನದಲ್ಲಿ ಜರಗಿತು. ಸಂಘದ ಸದಸ್ಯರಾದ ಶ್ರೀ ಬಾಲಕೃಷ್ಣ ಹೆಗ್ಡೆ ಬಿ ಅವರ ಅಗಲಿದ ಸ್ಮರಣಾರ್ಥವಾಗಿ
ಒಂದು ನಿಮಿಷದ ಮೌನಾಚರಣೆಯೊಂದಿಗೆ ಆರಂಭವಾದ ವಾರ್ಷಿಕ ಸರ್ವ ಸಾಧಾರಣ ಸಭೆಯು ಕಾರ್ಯಸೂಚಿ ಪ್ರಕಾರ ಶ್ರೀಮತಿ
ಶೊಭಾ ಶೈಣೈ ಅವರ ಪ್ರಾರ್ಥನೆಯೊಂದಿಗೆ ಆರOಭವಾದ ಸಭೆಯಲ್ಲಿ ಸಂಘದ ನಿಕಟಪೂರ್ವ ಸಿ ಎ ದಿನಕಾರ ಶೆಟ್ಟಿ
ಅವರು ಸ್ವಾಗತಿಸಿ, ಕಳೆದ ಸಾಲಿನಲ್ಲಿ ಅಸೋಸಿಯೇಶನ್ ಹಮ್ಮಿಕೊಂಡ ಕಾರ್ಯಕ್ರಮಗಳ ಬಗೆಗೆ ಬೆಳಕು ಚೆಲ್ಲಿದರು.
ನಂತರ ಕಾರ್ಯದರ್ಶಿಯಾದ ಶ್ರೀ ಪ್ರಕಾಶ ಶೆಣೈ ಅವರು ಅಸೋಸಿಯೇಶನ್‌ನ ವಿಸೃತ ವರದಿಯನ್ನು ಮಂಡಿಸಿದರು.
ಸಂಘದ ಖಜಾಂಚಿಯಾಗಿದ್ದ ಶ್ರೀ ನಾಗರಾಜ ಕೆ ಕಳೆದ ಸಾಲಿನ ಲೆಕ್ಕಪತ್ರವನ್ನು ಮಂಡಿಸಿ ಸದಸ್ಯರ ಅನುಮೋದನೆಯನ್ನು
ಪಡೆದರು. ನಂತರ ಆಡಳಿತ ಮಂಡಳಿಯ ಸದಸ್ಯರಾದ ಡಾ ಸುರೇಶರಮಣ ಮಯ್ಯ ಅವರು ನೂತನ ಸದಸ್ಯರನ್ನು ಪರಿಚಯಿಸಿದರು.
ನಂತರ ಈಶ್ವರನಗರ ರೆಸಿಡೆಂಟ್ಸ್ ವೆಲ್ಪಾರ್ ಅಸೋಸಿಯೇಶನ್ ಅದರ ಅದ್ಯಕ್ಷರಾಗಿ ಹಿಂದೆ ಸೇವ ಸಲ್ಲಿಸಿದ
ಹಾಗೂ 2022-23 ನೇ ಸಾಲಿನ ರೋಟರಿಯ ಡಿಸ್ಟ್ರಿಕ್ಟ್ ಗವರ್ನರ್ ಆಗಿ ಆಯ್ಕೆಗೊಂಡ ಡಾ ಜಯಗೌರಿ ಅವರನ್ನು
ಸನ್ಮಾನಿಸಲಾಯಿತು. ಡಾ ಗೌರಿ ಸನ್ಮಾನಕ್ಕೆ ಉತ್ತರಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ರಾಜವರ್ಮ ಅರಿಗರು
ಈಶ್ವರನಗರದ ಅಭಿವೃದ್ಧಿ ಕುರಿತು ಸದಸ್ಯರೊಂದಿಗೆ ವಿಸೃತ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಡಾ ಯಜ್ನೇಶ್
ಶರ್ಮ, ಸುಮಾ ನಾಯಕ್ ಹಾಗೂ ಇತರ ಸದಸ್ಯರು ಬಾಗವಹಿಸಿದರು.
ಸಂಘದ ಜತೆ ಕಾರ್ಯದರ್ಶಿಯಾದ ಡಾ ಶುಭಾ ಎಚ್ ಎಸ್ ಅವರು ಕಾರ್ಯಕ್ರಮಗಳನ್ನು ಸಂಯೋಜಿಸಿದ್ದರು. ಸಂಘದ ಉಪಧ್ಯಕ್ಷರಾದ ಶ್ರೀ ರಾಜವರ್ಮ ಅರಿಗರು ವಂದಿಸಿದರು. ನಂತರ ಮನರಂಜನಾ ಕಾರ್ಯಕ್ರಮಗಳನ್ನು ಶ್ರೀಮತಿ ಶಶಿಕಲಾ ರಾಜವರ್ಮ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸಂಜೆಯ ಉಪಹಾರವನ್ನು ಶ್ರೀ ಪ್ರಕಾಶ ಶೆಣೈ ಹಾಗೂ ಶ್ರೀ ರಾಜವರ್ಮ ಅರಿಗರು ಪ್ರಾಯೋಜಿಸಿದ್ದರೆ, ರಾತ್ರಿಯ ವಿಶೇಷ ಭೋಜನದ ಸಂಪೂರ್ಣ ವೆಚ್ಚವನ್ನು ಸಂಘದ ಅಧ್ಯಕ್ಷರಾದ ಸಿ ಎ ದಿನಕರ ಶೆಟ್ಟರು ಭರಿಸಿದ್ದರು.