ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಇದರ ವತಿಯಿಂದ ಉಡುಪಿ ತಾಲೂಕು 13ನೆಯ ಕನ್ನಡ ಸಾಹಿತ್ಯ ಸಮ್ಮೇಳನ, “ಉತ್ಥಾನ” ನವೆಂಬರ್ 25 ಶುಕ್ರವಾರ ಮತ್ತು 26 ಶನಿವಾರ, 2022ರಂದು ಡಾ. ನಿ. ಮುರಾರಿ ಬಲ್ಲಾಳ್ ವೇದಿಕೆ ಭವಾನಿ ಮಂಟಪ, ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಉಡುಪಿ ಇಲ್ಲಿ ಜರಗಿತು.
ಸಮ್ಮೇಳನಾಧ್ಯಕ್ಷರಾಗಿ
ನಮ್ಮ ಈಶ್ವರ ನಗರದಲ್ಲಿ ವಾಸಿಸುತ್ತಿರುವ ಡಾ. ಎನ್ ತಿರುಮಲೇಶ್ವರ ಭಟ್ ಆಯ್ಕೆಯಾಗಿದ್ದುದು ನಮೆಗೆಲ್ಲಾ
ಸಂತಸದ ವಿಚಾರ. ಡಾ. ಎನ್. ಟಿ. ಭಟ್ ಅವರು ಎಂ ಜಿ ಎಮ್ ಕಾಲೇಜಿನಲ್ಲಿ ಆಂಗ್ಲ ಬಾಷೆಯ ಪ್ರಾಧ್ಯಾಪಕರಾಗಿ
ಸೇವೆ ಸಲ್ಲಿಸಿದ್ದಲ್ಲದೆ, ಜರ್ಮನ್ ಭಾಷಾದ್ಯಾಪಕರಗಿಯೂ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ
ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನಪದ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದರು.
ನೀರ್ಕಜೆ ತಿರುಮಲೇಶ್ವರ ಭಟ್
ಅವರು ಮೂಲತಃ ಬಂಟ್ವಾಳ ತಾಲೂಕಿನ ನೀರ್ಕಜೆಯವರು. ವಿಟ್ಲದ ವಿಠಲ ಹೈಸ್ಕೂಲಿನಲ್ಲಿ
ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿ, ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೈನ್ಸ್ ಓದಿಕೊಂಡರು, ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸದಲ್ಲಿ ಬಿ.ಎ ಪದವಿ
ಪಡೆದರು. 1959ರಲ್ಲಿ ಆಲಿಘರ್
ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ, ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಗ್ರೋಸೆಸ್ ಶ್ಟ್ರಾಖ್ ಡಿಪ್ಲೋಮಾ ಪಡೆದರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಎಸ್.ಬಿ.ಶೋತ್ರಿ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ
ಪಡೆದಿದ್ದಾರೆ. ಎಂ.ಜಿ.ಎಂ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಟ್ಯೂಟರ್ ಆಗಿ ವೃತ್ತಿ ಆರಂಭಿಸಿ, ಉಪನ್ಯಾಸಕ, ಪ್ರಾಧ್ಯಾಪಕರಾಗಿಯೂ ಸೇವೆ
ಸಲ್ಲಿಸಿದ್ದಾರೆ.
ಜಾನಪದ ರಂಗಕಲೆಗಳ
ಅಧ್ಯಯನ ಕೇಂದ್ರದ ಉಪನಿರ್ದೇಶಕ, ಜಾನಪದ ಅಧ್ಯಯನ
ಕೇಂದ್ರ ನಿರ್ದೇಶಕರಾಗಿಯೂ
ಸೇವೆಸಲ್ಲಿಸಿದ್ದಾರೆ. ಇಂಡೋ ಜರ್ಮನ್ ಸೊಸೈಟಿಯ ಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ. ಜರ್ಮನ್ ಭಾಷಾತಜ್ಞ, ಶ್ರೇಷ್ಠ ಅನುವಾದಕ ಎಂದೇ
ಖ್ಯಾತಿಯ ಇವರ ಪ್ರವಾಸ ಕಥನ ‘ಜರ್ಮನಿಯಲ್ಲಿ
ಎರಡು ತಿಂಗಳು’ ಕೃತಿ ಉದಯವಾಣಿಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಕು.ಶಿ. ಹರಿದಾಸ ಭಟ್ಟ, ದೊರಕಿದ ದಾರಿ, ಶಾಸ್ತ್ರಪ್ರಯೋಗ ಸೇರಿದಂತೆ
ಹಲವು ಕನ್ನಡ ಕೃತಿಗಳನ್ನು ರಚಿಸಿದ್ದು, ಕನ್ನಡದಿಂದ ಜರ್ಮನ್ ಭಾಷೆಗೆ ಮತ್ತು ಇಂಗ್ಲಿಷ್ ಭಾಷೆಗೆ
ಹಲವಾರು ಕೃತಿಗಳನ್ನು ಅನುವಾದಿಸಿದ್ದಾರೆ.
ಡಾ ಎನ್ ಟಿ ಭಟ್ಟರ
ಬಗೆಗೆ, ಎಮ್ ಜಿ ಎಂ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಪ್ರೊ. ಯು. ಎಲ್ ಆಚಾರ್ಯರು ಬರೆದ “ಗತಿಸಿದ
ದಿನಗಳು” ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ – “ ಸುಮಾರು 1955ರಿಂದ ಈ ತನಕವೂ ಇದೇ ಎಮ್. ಜಿ.
ಎಮ್. ನ ಅಂಗಳದಲ್ಲಿ ಮೊದಲು ನಾಲ್ಕು ವರ್ಷಗಳಷ್ಟು ವಿದ್ಯಾರ್ಥಿಯಾಗಿ ಮುಂದೆ ಈ ತನಕವೂ ಇಂಗ್ಲಿಷ್,
ಜರ್ಮನ್ ಭಷಾಧ್ಯಾಪಕರಾಗಿರುವ ಶ್ರೀ ತಿರುಮಲೇಶ್ವರ ಭಟ್ಟರು ವಿದ್ಯಾರ್ಥಿಯಾಗಿಯೂ ಮುಂದೆ ಸುಮಾರು
15 ವರ್ಷಗಳ ತನಕ ಸಹೋದ್ಯೋಗಿಯಾಗಿಯೂ ನನಗೆ ತುಂಬಾ ಹಿತವಂದಿಗರಾಗಿದ್ದವರು. ವಿದ್ಯಾರ್ಥಿದೆಸೆಯಲ್ಲಿಯೇ
ಇವರ ಭಾಷಾ ಪ್ರೌಢಿಮೆಯನ್ನು ಮೆಚ್ಚಿದವನು ನಾನು. ಇಂಟರ್‌ಮೀಡಿಯೆಟ್ ಪಾಸಾಗುವುದರೊಳಗೇನೆ ದೀರ್ಘವಾದ
ಕಾವ್ಯವೊಂದನ್ನು ಅವರು ಬರೆದುದು ನನ್ನ ನೆನಪಿನಲ್ಲಿದೆ. ಇತರ ಎಲ್ಲಾ ವಿಷಯಗಳಲ್ಲಿಯೂ ಉತ್ತಮ ಅಂಕಗಳನ್ನು
ಪಡೆದ ವಿದ್ಯಾರ್ಥಿ. ವಿಜ್ಞಾನ ವಿಷಯಗಳಲ್ಲಿಯೂ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿ. ವಿಜ್ಞಾನ ವಿಷಯಗಳಲ್ಲಿಯೂ
ಉತ್ತಮ ಅಂಕಗಳನ್ನೂ ಪಡೆದರೂ, ಆರ್ಥಿಕ ಅನನುಕೂಲದ ಕಾರಣ ಮುಂದೆ ತಾಂತ್ರಿಕ ವಿಷಯಗಳನ್ನಾರಿಸದೆ ಇಲ್ಲಿಯೇ
ಇಂಗ್ಲಿಷ್ ಡಿಪಾರ್ಟ್‌ಮೆಂಟನ್ನು ಸೇರಿಕೊಂಡು, ಇಲ್ಲಿಂದಲೇ ಎಮ್ ಎ ಪದವಿಯನ್ನು ಪಡೆದರು. ಅನಂತರ
ಇಲ್ಲಿ ಇಂಗ್ಲಿಷ್ ವಿಭಾಗದಲ್ಲಿದ್ದಾಗಲೇ ಜರ್ಮನ್ ಕ್ಲಾಸುಗಳನ್ನು ಸೇರಿ, ಆ ಭಾಷಾಧ್ಯಾಯನ ಮಾಡಿ, ಅದರಲ್ಲೇ
ಮುಂದೆ ಪಿ. ಎಚ್. ಡಿ ಪದವಿ ಪಡೆದು, ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕ್ಲಾಸು ಬಿಟ್ಟ
ಅನಂತರ ಜರ್ಮನ್ ಭಾಷಾ ಕ್ಲಾಸುಗಳನ್ನು ನಡೆಸುತ್ತಾ ಬಂದವರು. ಬಹಳ ಮೃದು ಸ್ವಭಾವದ, ಅತ್ಯಂತ ವಿನಯಶೀಲ
ಮನುಷ್ಯ, ತನ್ನ ಸೌಜನ್ಯದಿಂದಲೇ ಯಾವನನ್ನೂ ಗೆಲ್ಲಬಲ್ಲವರು. 1955ರ ವಿದ್ಯಾರ್ಥಿದೆಸೆಯ ವಿನಯ ಮೃದುತ್ವಗಳೂ
ಇಂದಿಗೂ, ಅರುವತ್ತನ್ನು ಸಮೀಪಿಸುವಾಗಲೂ ಇವರಲ್ಲಿ ಕಾಣಬಹುದಾಗಿದೆ. ಹೀಗೆ ಮನಸಾರೆ ಮೆಚ್ಚಿದ ವಿದ್ಯಾರ್ಥಿಗಳಲ್ಲಿಯೂ
ನನ್ನ ಸಹ ಅಧ್ಯಾಪಕರಲ್ಲಿಯೂ ಇವರು ನನಗೆ ತುಂಬ ಪ್ರೀಯರಾದವರು. ವಿದ್ಯಾರ್ಥಿಯಾಗಿ ನಾಲ್ಕು ವರ್ಷಗಳು,
ಮುಂದೆ ಪ್ರಾಧ್ಯಾಪಕರಾಗಿ ಅಂದಿನಿಂದ ಇಂದಿನ ತನಕವೂ ಅದೇ ಸಗುಮುಖ, ವಿನಯ, ಬಹಳ ಮೃದುವಾದ ಮಾತುಗಳು,
ಏನು ಕೆಲಸವನ್ನು ಇವರಿಗೆ ಹಚ್ಚಿಕೊಟ್ಟರೂ ಅದರತ್ತ ಪ್ರಾಮಾಣಿಕ ಗಮನ. ಅವು ಇವರಲ್ಲಿ ಉದ್ದಕ್ಕೂ ನಾನು
ಕಂಡ ಸದ್ಗುಣಗಳು. ಸುಮಾರು 1959-60ರಿಂದ ನಮ್ಮ ಎಮ್. ಜಿ. ಎಮ್. ಕಾಲೇಜಿನಿಂದ, ವಿವಿಧ ವಿಬಾಗಗಳಿಂದ
ಆದ ಎಲ್ಲಾ ಪ್ರಕಟಣೆಗಳು, ಮ್ಯಾಗಸಿನ್‌ಗಳು, ಇವೆಲ್ಲವಗಳನ್ನೂ ತಿದ್ದಿ, ಮುದ್ರಣದ ಪ್ರೂಪ್‌ಗಳ ಮೇಲೆ
ಕಣ್ಣಾಡಿಸುತ್ತಿದ್ದವರು ಶ್ರೀ ಭಟ್ಟರು. ತಮ್ಮ ಬಿಡುವಿನ ಸಮಯದಲ್ಲೂ ಕಾಲೇಜಿಗಾಗಿ ದುಡಿದವರು. ಒಂದಿಷ್ಟೂ
ಬೇಸರ, ಔದಾಸೀನ್ಯಗಳಿಲ್ಲದೆ ಮನ:ಸ್ಫೂರ್ತಿಯಿಂದ ದುಡಿದವರು.
ಇಂಥವರು, ಇಂಥಾ ನಿಷ್ಕಾಮ ಸೇವಾವೃತ್ತಿಯ ಜನ ಈಗಿನ ದಿನಗಳಲ್ಲಿ ದುರ್ಲಭರಾಗುತ್ತಿದ್ದಾರೆ. ತಾವೇ ಇಂಗ್ಲಿಷ್,
ಕನ್ನಡ ಭಾಷೆಗಳಲ್ಲಿ ಪ್ರವೀಣರಾದ ಶ್ರೀ ಭಟ್ಟರಿಂದ ಶೀಘ್ರದಲ್ಲೇ ಯಾವುದಾದರೂ ಸ್ವತಂತ್ರವಾದ ಉದ್ಗ್ರಂಥವು
ಸದ್ಯದಲ್ಲಿಯೇ ಪ್ರಕಟವಾಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ.”
ಡಾ ಎನ್. ಟಿ. ಭಟ್ಟರು
ನಮ್ಮ ಈಶ್ವರನಗರ ರೆಸಿಡೆನ್ಸಿಯಲ್ ವೆಲ್ಪಾರ್ ಅಸೋಸಿಯೇಶನ್ ಇದರ ಕಾರ್ಯಕಾರಿ ಸಮಿತಿಯ ಸದಸ್ಯರು
ಹಾಗೂ ಮಣಿಪಾಲ ಕೆ. ಎಮ್ ಸಿ ಇದರ ಆರ್ಥೊಪಿಡಿಕ್ಸ್ ವಿಭಾಗದ ಮುಖ್ಯಸ್ಥರಾಗಿರುವ ಡಾ ಶ್ಯಾಮಸುಂದರ್
ಭಟ್ ಅವರ ತಂದೆಯವರು ಹಾಗೂ ಮಣಿಪಾಲದ ಡೆಂಟಲ್ ಕಾಲೇಜಿನ ಅಸೋಸಿಯೇಟ್ ಡೀನ್ ಆಗಿರುವ ಡಾ ವಿದ್ಯಾ
ಸರಸ್ವತಿಯ ಮಾವ.
Other Links
The news appeared in Karavali Express
Video Links