ಈಶ್ವರ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಇವರು ಜಂಟಿಯಾಗಿ ಆಯೋಜಿಸಿದ ಉಚಿತ ಅರೋಗ್ಯ ತಪಾಸಣಾ ಶಿಬಿರವು 03-03-2024ರ ಬಾನುವಾರದಂದು ಈಶ್ವರ ನಗರದ ಡಾ. ಟಿ.ಎಮ್.ಎ. ಪೈ ಪೊಲಿಟೆಕ್ನಿಕ್‌ನಲ್ಲಿ ನಡೆಯಿತು. ಈ ಶಿಬಿರವು ರಕ್ತದೊತ್ತಡ, ಮಧುಮೇಹ, ಇ.ಸಿ.ಜಿ ಮತ್ತು ದೇಹದ ಎಲುಬುಗಳ ಸಾಂದ್ರತೆ ಪರೀಕ್ಷೆಗಳು ಹಾಗೂ ಸಾಮಾನ್ಯ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣೆಗಳನ್ನು ಒಳಗೊಂಡಿತು. ಅಲ್ಲದೆ ಮಧುಮೇಹ ತಪಾಸಣೆಯನ್ನು ಸಹ ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು.. ಈ ಶಿಬಿರವು ಈಶ್ವರ ನಗರ, ಪರ್ಕಳ, ಅತ್ರಾಡಿ, ಮಣಿಪಾಲ ಮತ್ತು ಸುತ್ತಮುತ್ತಲಿನ ಸುಮಾರು 80ಕ್ಕೂ ಹೆಚ್ಚು ಜನರಿಗೆ ಉಪಯೋಗವಾಯಿತು.
ಇದರ
ಉದ್ಘಾಟನಾ ಕಾರ್ಯಕ್ರಮವನ್ನುಅದೇ ದಿನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ
ಅತಿಥಿಗಳಾಗಿ ಮಣಿಪಾಲ ಸೋನಿಯ ಕ್ಲೀನಿಕ್ ಇದರ ಮಕ್ಕಳ ತಜ್ಷೆಯಾಗಿರುವ ಹಾಗೂ ರೋಟರಿ ಜಿಲ್ಲೆ 3182
ಇದರ ನಿಕಟಪೂರ್ವ ಗವರ್ನರ್ ಆಗಿದ್ದ ಡಾ. ಜಯಗೌರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅತಿಥಿಗಳಾಗಿ ಮಣಿಪಾಲ ಟಿ. ಎಮ್. ಎ. ಪೈ ಇದರ ಪ್ರಾಂಶುಪಾಲರಾದ ಪ್ರೊ. ಕಾಂತರಾಜ್ ಏ. ಎನ್, ಈಶ್ವರ ನಗರ ವಾರ್ಡ್‌ನ ಕೌನ್ಸಿಲರ್ ಆಗಿರುವ ಶ್ರೀ
ಮಂಜುನಾಥ್, ಈಶ್ವರ ನಗರ ರೆಸಿಡನ್ಸಿಯಲ್
ಅಸೋಸಿಯೇಶನ್ ಇದರ ಅಧ್ಯಕ್ಷರಾಗಿರುವ ಶ್ರೀ ರಾಜವರ್ಮ ಅರಿಗ, ಈಶ್ವರ ನಗರ ರೆಸಿಡನ್ಸಿಯಲ್
ವೆಲ್ಪೇರ್ ಅಸೋಸಿಯೇಶನ್ ಇದರ ಉಪಾಧ್ಯಕ್ಷರು ಮತ್ತು ಮಣಿಪಾಲದ ಎಲುಬು ಹಾಗೂ ಕೀಲು ವಿಭಾಗದ
ಮುಖ್ಯಸ್ಥರು ಹಾಗೂ ಪ್ರೊಪೆಸರ್ ಆಗಿರುವ ಡಾ. ಶ್ಯಾಮಸುಂದರ್ ಭಟ್ ಹಾಗೂ ಮಣಿಪಾಲ ಕಾಲೇಜ್ ಆಪ್ ಹೆಲ್ತ್ ಪ್ರೊಪೆಶನ್ಸ್
ಇದರ ಪ್ರೊಪೆಸರ್ ಹಾಗೂ ಡೀನ್ ಆಗಿರುವ ಡಾ ಜಿ ಅರುಣ ಮಯ್ಯ ಭಾಗವಹಿಸಿದ್ದರು. ಕಾರ್ಯಕ್ರಮದ
ಯಶಸ್ಸಿಗಾಗಿ ಬೆಂಗಳೂರಿನ ಮೆಡಿಟೆಕ್ ಇಂಡಿಯಾ ಲಿಮಿಟೆಡ್ ಇದರ ನಿರ್ದೇಶಕರಾದ ಶ್ರೀ ಪ್ರಮೋದ್
ಹೆಗ್ಡೆಆಗಮಿಸಿ ಸಹಕರಿಸಿದ್ದರು.
ಡಾ
ದಿವ್ಯಶ್ರೀ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಉದ್ಘಾಟನಾ ಕಾರ್ಯಕ್ರಮ ಈಶ್ವರ ನಗರ
ರೆಸಿಡನ್ಸಿಯಲ್ ಅಸೋಸಿಯೇಶನ್ ಇದರ ಅಧ್ಯಕ್ಷರಾಗಿರುವ ಶ್ರೀ ರಾಜವರ್ಮ ಅರಿಗ ಅವರ ಸ್ವಾಗತ
ಭಾಷಣದೊಂದಿಗೆ ಆರಂಭವಾಯಿತು. ಶ್ರೀ ಅರಿಗ ಅವರು ಮಾತನಾಡುತ್ತಾ, “ಸುಮಾರು ಹದಿನೆಂಟು ವರ್ಷಗಳ
ಹಿಂದೆ ಒಂದು ಸ್ನೇಹ ಸೌಹಾರ್ದ ಕೂಟವಾಗಿ ಬೆಳೆದು ಬಂದ ಈ ಸಂಸ್ಥೆಯಲ್ಲಿ ಸುಮಾರು 120ಕ್ಕಿಂತಲೂ
ಹೆಚ್ಚು ಸದಸ್ಯರಿದ್ದಾರೆ. ಈಶ್ವರ ನಗರದಲ್ಲಿರುವ ಹಲವಾರು ಹಿರಿಯರು ಇದರ ಅದ್ಯಕ್ಷರಾಗಿದ್ದುಕೊಂಡು
ಸಮಾಜಮುಖಿ ಕಾರ್ಯಕ್ರಮಗಳಾದ ಸ್ವಚ್ಛತೆ, ಆರೋಗ್ಯಕ್ಕೆ ಸಂಬಂದಿಸಿದ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುತ್ತಿದ್ದೇವೆ. ಹಾಗೇ ಈ ಅರೋಗ್ಯ
ತಪಾಸಣೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದೇವೆ. ಈ ಹಿಂದೆ ಇಂತಹ ಕಾರ್ಯಕ್ರಗಳನ್ನು ಕೇವಲ
ಈಶ್ವರನಗರ ವಾರ್ಡಿನ ಸದಸ್ಯರಿಗೆ ಸೀಮಿತಗೊಳಿಸಲಾಗಿತ್ತು. ಈಗ ಅದನ್ನು ಹಾಗೆ ಸೀಮಿತಗೊಳಿಸದೆ, ಅದರ
ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ. ಹಲವಾರು ಪ್ರದೇಶಗಳಲ್ಲಿ ಅದರ ಪ್ರಕಟಣೆಯನ್ನು
ಪ್ರಕಟಿಸಿದ್ದೇವೆ. ಈ ಕಾರ್ಯಕ್ರಮದ ಉದ್ಘಾಟಣೆಗೆ ನಮ್ಮವರೇ ಆದ ಡಾ ಜಯಗೌರಿ, ಪ್ರಖ್ಯಾತ ಶಿಶು
ತಜ್ಞೆ, ಸೋನಿಯಾ ಕ್ಲೀನಿಕ್, ಮಣಿಪಾಲ ಅವರನ್ನು ಕೇಳಿಕೊಂಡಿದ್ದೇವೆ. ಅವರು ನಮ್ಮವರು, ನಮ್ಮ
ಈಶ್ವರ ನಗರದ ನಿವಾಸಿ, ನಮ್ಮ ಈಶ್ವರ ನಗರ ರೆಸಿಡೆನ್ಸಿಯಲ್ ವೆಲ್ಪಾರ್ ಅಸೋಸಿಯೇಶನ್‌ನಲ್ಲಿ
ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿದ್ದವರು, ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದವರು, ನಮ್ಮ
ಈಶ್ವರನಗರ ವಾರ್ಡ್ ಇದರ ತಾಜ್ಯ ನಿವಾರಣೆಗೆ ಸೇವೆ ಸಲ್ಲಿಸಿದವರು, ಅವರು ರೋಟರಿ ಜಿಲ್ಲೆಯ ಅಂತರಾಷ್ಟ್ರೀಯ
ರೋಟರಿ ಜಿಲ್ಲೆಯ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದವರು, ಕರ್ನಾಟಕಲ್ಲಿ ಒಟ್ಟು ಇರುವ ಐದು ರೋಟರಿ
ಜಿಲ್ಲೆಗಳಲ್ಲಿ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಆಯ್ಕೆಯಾದವರು. ಮಹಿಳಾ ಸಬಲೀಕರಣ ಹಾಗೂ ಅಂಗಾಂಗ
ದಾನ, ಅಂಗಾಂಗ ನ್ಯೂನತೆ ಇರುವ ಮಕ್ಕಳನ್ನು ಗುರುತು ಹಿಡಿದು ಅವರಿಗೆ ಶುಶ್ರೂಸೆ ಕೊಡುವುದು –
ತಾಜ್ಯ ವಿಲೆವಾರಿ -ಪರಿಸರ ಸಂರಕ್ಷಣೆ - ಹೀಗೆ ಹಲವಾರು
ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು. ಅವರು ಏನಾದರೂ ಮಾಡಲೇ ಬೇಕೆಂದರೆ ಅದು ಆಗಲೇ ಬೇಕು.
ಅಲ್ಲದೆ ಅದು ಸಮಯಕ್ಕೆ ಸರಿಯಾಗಿ ಆಗಬೇಕು. ನಮ್ಮ ಈ ಪ್ರದೇಶದ ವೃತ್ತಿ ಜೀವನದಲ್ಲಿ ಹಾಗೂ ಸಾಮಾಜಿಕ
ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಗೊಂಡ ಅವರನ್ನು ಎಲ್ಲರೂ ಗೌರವದಿಂದ ಕಾಣುತ್ತಿದ್ದಾರೆ. ಅವರು
ಈ ಕಾರ್ಯಕ್ರಮದ ಉದ್ಘಾಟಣೆಗಾಗಿ ಬಂದಿದ್ದಾರೆ. ಅವರಿಗೆ ಸ್ವಾಗತವನ್ನು ಕೋರಿದರು.
ಆಲ್ಲದೆ
ಸೂಕ್ತ ಜಾಗದ ಅನ್ವೇಷಣೆಗಾಗಿ ಹುಡುಕುತ್ತಾ ಇದ್ದಾಗ, ತಕ್ಕುದಾದ ಸ್ಥಳ ಕೊಟ್ಟ ಕಾರಣ ಈ
ಕಾರ್ಯಕ್ರಮದ ಯಶಸ್ವಿಯಲ್ಲಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲರಿಗೆ ಸ್ವಾಗತವನ್ನು ಕೋರಿದರು.
ಅಲ್ಲದ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಶ್ರೀ ಪ್ರಮೋದ ಹೆಗ್ಡೆಯವರಿಗ ಸ್ವಾಗತವನ್ನು ಕೋರಿದರು.
ನಂತರ ಡಾ. ಜಯಗೌರಿ ಅವರು ಮಾತನಾಡುತ್ತಾ, ಇಪ್ಪತ್ತು ವರ್ಷಗಳ
ಹಿಂದೆ ಈ ಅಸೋಸಿಯೇಶನ್ ಪ್ರಾರಂಭವಾದಾಗ ನಾವು ಉಹಿಸಿರಲಿಲ್ಲ. ನಾವು ಬೇರೆ ಬೇರೆ ವ್ಯಕ್ತಿಗಳ
ಮನೆಗಳಲ್ಲಿ ಒಟ್ಟು ಸೇರುತ್ತಾ ಈ ಕೊಲನಿಯ ಅಭಿವೃದ್ಧಿಯ ಬಗೆಗೆ ಚರ್ಚಿಸುತ್ತಿದ್ದೇವು. ಇಂದು ಸುಮಾರು
120 ಕುಟುಂಗಳು ಒಟ್ಟುಸೇರಿ ಇದೊಂದು Strong Association ಆಗಿದೆ. "I don't fully agree with what
Mr. Ariga just mentioned. While some of his points are valid, not all of them
are accurate. He served as the District Secretary during my tenure as District
Governor, and that collaboration was key to our achievements. All the credit
for our accomplishments truly goes to Mr. Ariga. I enjoy attending the Eshwar
Nagar meetings because it gives me the opportunity to see many of you who I
wouldn't otherwise meet. I appreciate everyone taking part in today's function.
Let's try to meet more frequently, ideally twice a year, at both the health
camp and the Annual Day Celebration. I hope to see all of you there."
"I want to express my appreciation for Mr. Kalmadi, an active member of our association. He consistently goes above and beyond, tirelessly working to get things done. We are fortunate to have such a dedicated Councillor who actively shares updates on Eshwar Nagar issues via WhatsApp. As Dr. Maiya rightly said, 'health is wealth.' It wasn't until I lost the use of my left hand that I truly understood how crucial every part of our body is. Please, take care of your health.
Recently,
we hosted an Artificial Limb Camp at Rotary, and I was stunned to discover that
ninety percent of those who lost their lower limbs were diabetic. This loss was
due to neglect of proper care for their limbs and feet. If you have diabetes,
it's vital to take care of your limbs to prevent complications like gangrene.
May
God bless everyone with good health and peace of mind. Let's make an effort to
gather more often and support each other in both good times and bad. Thank you
very much." – Dr. Jaya Gowri emphasized these points after lighting the
lamp.
The
Principal of the TMA Pai Polytechnic, Prof. Kanthraj spoke with Kannada saying,
“ ಜನ ಸೇವೆಯೇ ಜನಾರ್ಧನೆ ಸೇವೆ” ಈಶ್ವರ ನಗರ
ಅಸೋಸಿಯೇಶನ್ ಅವರು ಈ ಆರೋಗ್ಯ ಶಿಬಿರ ಮಾಡುವುದುರಿಂದ ಜನರ ಸೇವೆ ಮಾಡುತ್ತಿದ್ದಾರೆ. ಅಲ್ಲದೆ
ಸಮಾರು ತಂಗಳ ಹಿಂದೆ ಈಶ್ವರ ನಗರ ಅಸೋಸಿಯೇಶನ್ ಇದರೆ ಶ್ರೀ ಮಂಜುನಾಥ್ ಅವರು Blood Donation ಕ್ಯಾಂಪ್ ಮಾಡಿದ್ದರು, ಅಲ್ಲದೆ ಅಸೋಸಿಯೇಶನ್ ನಡೆಸಿದ
ವರಾಹಿ ಯೋಜನೆ: ಅದರ ಸಾಧಕ ಬಾಧಕಗಳ ಬಗಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಸಹ ಇಲ್ಲಿ ಆಗಿತ್ತು. ಇದೆಲ್ಲಾ
ಸಮಾಜಕ್ಕೆ ಪ್ರಯೋಜಕಾರಿಯಾದ ಕಾರ್ಯಕ್ರಮ. ಅಲ್ಲದೆ ಸಂಸ್ಥೆ ಹಮ್ಮಿಕೊಂಡ 20ಕ್ಕಿಂತಲೂ ಹೆಚ್ಚಿನ ಕೌಶಲಗಳಲ್ಲಿ
ತರಬೇತಿ ನೀಡುವ ಕಾರ್ಯಕ್ರಮಗಳಲ್ಲಿ ತಾವೂ ತಮ್ಮ ಸ್ನೇಹಿತರು ಭಾಗವಹಿಸಬೇಕೆಂದು ಕರೆ ನೀಡಿದರು. ಈ
ಸಂಸ್ಥೆಯಲ್ಲಿ ಡಾ ಪಾಬ್ಲಾ ಅವರ ನೇತ್ರತ್ವದಲ್ಲಿ ಆದ ಬದಲಾವಣೆಯನ್ನು ತಿಳಿಸಿದರು.
ನಂತರ
ಸಭೆಯನ್ನುದ್ದೇಶಿಸಿ ಮಾತನಾಡಿದ ನಗರಸಭಾ ಸದಸ್ಯರಾದ ಶ್ರೀ ಮಂಜುನಾಥ್ ಅವರು ಮಾತನಾಡುತ್ತಾ ಈ ಅಸೋಸಿಯೇಶನ್ ಇದರ
ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಾ ಇರುವುದು ನನಗೆ ಹೆಮ್ಮೆ ಎಂದರಲ್ಲದೆ, ಈ
ಕಾಲೇಜಿನ ನಿರಂತರ ಸಂಭಂಧ ಒಂದು ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಡಾ. ಗೌರಿಯವರ
Motivation, Encouragement ತುಂಬ ಸಂತೋಷವನ್ನು ನೀಡಿದೆ.
ಇಲ್ಲಿ ಸೇವ ಸಲ್ಲಿಸಲು ಬಂದಿರುವ ಎಲ್ಲಾ ಸಿಬಂದಿವರ್ಗ ಅದ್ಯಕ್ಷರಿಂದ ಪುಷ್ಪವನ್ನು ಸ್ವೀಕರಿಸಿದರು. ಅಲ್ಲದೆ ಈಶ್ವರನಗರದ ಹಿರಿಯ ಸದಸ್ಯರಾದ ಶ್ರೀ ಜಗನ್ನಾಥ ಶೆಟ್ಟರು ಹಾಗು ಕರ್ನಲ್ ಶ್ಯಾನುಭೊಗ್ ಅವರು ಅದ್ಯಕ್ಷರಿಂದ ಪುಷ್ಪವನ್ನು ಸ್ವೀಕರಿಸಿದರು. ಕೊನೆಯಲ್ಲಿ ಡಾ ಶ್ಯಾಮಸುಂದರ ಭಟ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 80 ಜನರು ಅರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ಈ ಸಮಗ್ರ ಕಾರ್ಯಕ್ರಮವನ್ನು ಈಶ್ವರನಗರ ರೆಸಿಡೆನ್ಸಿಯಲ್ ಅಸೋಸಿಯೇಶನ್ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಹರೀಶ್ ಜಿ. ಕಲ್ಮಾಡಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
Some of the Photos are given below: