Saturday, 28 September 2024

ಈಶ್ವರ ನಗರ ರೆಸಿಡೆನ್ಷಿಯಲ್ ವೆಲ್ಫೇರ್ ಅಸೋಸಿಯೇಶನ್ 18ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ಸನ್ಮಾನ ಸಮಾರಂಭ

1.     ಕಾರ್ಯಕ್ರಮದ ಆರಂಭ:

ಈಶ್ವರ ನಗರ ರೆಸಿಡೆನ್ಷಿಯಲ್ ವೆಲ್ಪೇರ್ ಅಸೋಸಿಯೇಷನ್‌ (ERWA) ತನ್ನ 18ನೇ ವಾರ್ಷಿಕ ಸಾಮಾನ್ಯ ಸಭೆಯನ್ನು 28 ಸೆಪ್ಟೆಂಬರ್ 2024ರ ಶನಿವಾರ, ಈಶ್ವರ ನಗರದಲ್ಲಿರುವ ವೈಶ್ಣವಿ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಿತು. ಕಾರ್ಯಕ್ರಮವು ಸಂಜೆ 5.30ಕ್ಕೆ ಮಕ್ಕಳ ಆಟೋಟಗಳಿಂದ ಆರಂಭವಾಯಿತು, ಇದರಲ್ಲಿ ಮಕ್ಕಳಿಗಾಗಿ ವಿವಿಧ ಆಟೋಟಗಳು ಆಯೋಜಿಸಲಾಗಿತ್ತು. ಮಕ್ಕಳ ಆಟಗಳೊಂದಿಗೆ, ಹಿರಿಯರಿಗಾಗಿ ಕೆಲ ವಿಶೇಷ ಮನರಂಜನೆ ಹಾಗೂ ಅಟೋಟ ಕಾರ್ಯಕ್ರಮಗಳು ನಡೆದವು. ಸಭೆ ಮುನ್ನ ವಿವಿಧ ಚಟುವಟಿಕೆಗಳು, ಸಮುದಾಯದ ಏಕತೆ ಮತ್ತು ಸಾಮರಸ್ಯವನ್ನು ಪ್ರತಿಪಾದಿಸುವ ಹಲವಾರು ಜನಪ್ರಿಯ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಯಿತು. ಮಕ್ಕಳನ್ನು ತೊಡಗಿಸಿಕೊಂಡ ಆಟಗಳು ಮತ್ತು ಮನರಂಜನೆ ಕಾರ್ಯಕ್ರಮಗಳು ಸಭೆಗೆ ಪ್ರಾರಂಭಿಕ ಚೈತನ್ಯವನ್ನು ನೀಡಿತು.

2.     ಸಮಾಜಮುಖಿ ಚಟುವಟಿಕೆಗಳ ಪ್ರಮುಖ ವೇದಿಕೆ:

ಈಶ್ವರನಗರ ರೆಸಿಡೆನ್ಸಿಯಲ್ ವೆಲ್ಪೇರ್ ಅಸೋಸಿಯೇಷನ್‌ ಈಶ್ವರ ನಗರದಲ್ಲಿ ಹಲವು ಸಾರ್ವಜನಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿಹಿಡಿದಿದೆ. ಈ ಸಂಘವು 2006ರಿಂದಲೂ ಕಾರ್ಯನಿರ್ವಹಿಸುತ್ತಿದ್ದು, ಈಶ್ವರನಗರದ ನಿವಾಸಿಗಳ ಒಕ್ಕೂಟವಾಗಿ ತನ್ನ ಕಲ್ಯಾಣಕಾರಿ ಚಟುವಟಿಕೆಗಳ ಮೂಲಕ ಈ ಪ್ರದೇಶದಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದೆ. ಇಲ್ಲಿ ನಡೆದ ಸಾರ್ವಜನಿಕ ಕಾಮಗಾರಿ ಯೋಜನೆಗಳು, ವಿವಿಧ ಅವಶ್ಯಕತೆಗಳ ಮರುಪರಿಶೀಲನೆ ಮತ್ತು ಪರಿಸರ ಸಂರಕ್ಷಣೆ ಯೋಜನೆಗಳು ಅರ್ಥಪೂರ್ಣವಾಗಿದ್ದು, ನಮ್ಮ ಈಶ್ವರ ನಗರವನ್ನು ಒಂದು ಆದರ್ಶ ರೆಸಿಡೆನ್ಸಿಯಲ್‌ ಕೊಲನಿ ಆಗಿ ಮಾರ್ಪಡಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

3.     ಸಾಮಾಜಿಕ ಸೇವೆಗಳು ಮತ್ತು ಯೋಜನೆಗಳು:

ಈಶ್ವರ ನಗರದಲ್ಲಿ ನಡೆದ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸೇವೆಗಳನ್ನು ಈ ವೇದಿಕೆ ಮೂಲಕ ಸಂಘವು ನೀಡುತ್ತಿದೆ. ಬೀದಿ ದೀಪ, ರಸ್ತೆಗಳ ಡಾಮರೀಕರಣ, ಸ್ವಚ್ಛ ಈಶ್ವರ ನಗರ, ಮನೆ-ಮನೆ ಕಸದ ಸಂಗ್ರಹ, ಮಳೆನೀರಿನ ಕೊಯ್ಲು ಯೋಜನೆ, ಕಸ ವಿಲೇವಾರಿ ಯೋಜನೆ ಮತ್ತು ಅರೋಗ್ಯ ಶಿಬಿರಗಳು ಈಶ್ವರ ನಗರದಲ್ಲಿನ ಸಮಾಜಮುಖಿ ಯೋಜನೆಗಳ ಒಂದು ಪ್ರಮುಖ ಭಾಗವಾಗಿದೆ. WhatsApp ಗ್ರೂಪ್, ನ್ಯೂಸ್ಲೆಟರ್‌ಗಳು, ನಿಯಮಿತ ಸಭೆಗಳು ಮತ್ತು ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯಿಂದ ಸಂಘವು ತನ್ನ ಸದಸ್ಯರಿಗೆ ದೈನಂದಿನ ಮಾಹಿತಿಗಳನ್ನು ನೀಡಲು ಕ್ರಮ ಕೈಗೊಳ್ಳುತ್ತಿದೆ.

4.     ಮುಖ್ಯ ಅತಿಥಿಗಳ ಪರಿಚಯ:

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು. ಅವರೊಂದಿಗೆ, ಅಸೋಸಿಯೇಶನ್‌ ನಲ್ಲಿ ಹಿರಿಯ ಸಲಹೆಗಾರರಾದ ಹಾಗೂ ಮಣಿಪಾಲದ ಸೋನಿಯ ಕ್ಲಿನಿಕ್‌ ಇದರ ಮಕ್ಕಳ ತಜ್ನರಾಗಿರುವ ಡಾ. ಗೌರಿ, ಈಶ್ವರ ನಗರ ರೆಸಿಡೆನ್ಷಿಯಲ್ ವೆಲ್ಪೇರ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿರುವ, ಶ್ರೀ ರಾಜವರ್ಮ ಅರಿಗ,, ಅಸೋಸಿಯೇಶನ್‌ ಅದರ ಕಾರ್ಯದರ್ಶಿಯಾಗಿರುವ  ಡಾ. ವಿನಾಯಕ್ ಶೆಣೈ, ಜತೆ ಕಾರ್ಯದರ್ಶಿ ಡಾ. ರಘು ಚಂದ್ರಶೇಖರ್‌, ಡಾ. ಶ್ಯಾಮಸುಂದರ ಭಟ್, ಉಪಾಧ್ಯಕ್ಷರು ಹಾಗೂ ಅಸೋಶಿಯೇಶನ್‌ ಇದರ ಖಜಾಂಚಿಯಾಗಿದ್ದ ಶ್ರೀ ಗಣಪತಿ ಕಾಮತ್,. ಇವರೆಲ್ಲರೂ ಸಭೆಯ ವೇದಿಕೆಯನ್ನು ಅಲಂಕರಿಸಿದರು.

5.     ಪ್ರಾರ್ಥನೆ:

ಯಾವುದೇ ಸಭೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವುದು ಸೂಕ್ತ. ಪ್ರಾರ್ಥನೆಯು ಸಭೆಯ ಶ್ರೇಷ್ಠತೆಯನ್ನು ಹೆಚ್ಚಿಸುತ್ತೆ. ಪ್ರಾರ್ಥನೆಯ ಕಾರ್ಯಕ್ರಮವನ್ನು ಶ್ರೀಮತಿ ಸುಮಿತ್ರ ಕಲ್ಮಾಡಿ ಅವರು ನಡೆಸಿದರು.

6.     ಅಧ್ಯಕ್ಷರ ಸ್ವಾಗತ ಭಾಷಣ:

ವ್ಯಕ್ತಿಯ ಮನಸ್ಸಿನಲ್ಲಿ ಅಭಿವೃದ್ಧಿಯ ಪರಿಕಲ್ಪನೆ ಹಾಗೂ ಬೆಳವಣಿಗೆ ಆರಂಭಗೊಳ್ಳುತ್ತದೆ. ಆ ಕಲ್ಪನೆ, ಸದಸ್ಯರ ಒಪ್ಪಿಗೆ ಪಡೆದಾಗ, ಅದೊಂದು ಯಶಸ್ವಿ ಪ್ರಯೋಗವಾಗಿ ಮಾರ್ಪಾಡಾಗುತ್ತದೆ. ನಮ್ಮ ಅಸೋಸಿಯೇಶನ್‌ ಇದರ ಅದ್ಯಕ್ಷರಾದ ಶ್ರೀ ರಾಜವರ್ಮ ಅರಿಗರ ಹಲವಾರು ಐಡಿಯಾಗಳು ಮತ್ತು ಚಿಂತನೆಗಳು ಈ ಪ್ರದೇಶದ ಅಭಿವೃದ್ಧಿಗೆ ಬಹು ಮುಖ್ಯ ಪಾತ್ರ ವಹಿಸಿದೆ. ಶ್ರೀ ಅರಿಗರ ಸಂಪೂರ್ಣ ಸ್ವಾಗತವನ್ನು ಈ ಕೆಳಗೆ ನೀಡಲಾಗಿದೆ.

“ನಾವು ಈಶ್ವರ ನಗರ ರೆಸಿಡೆನ್ಸಿಯಲ್ ವೆಲ್ಫೆರ್ ಅಸೋಸಿಯೇಶನ್ ಇದರ 18ನೇ ವಾರ್ಷಿಕ ಅಧಿವೇಶನದಲ್ಲಿ ಇದ್ದೇವೆ. ಇದು ನಮ್ಮ ಅಸೋಸಿಯೇಶನ್‌ಗೆ ಮಹತ್ವದ ಕ್ಷಣವಾಗಿದೆ. ಮೊದಲಿಗೆ, ಉಡುಪಿ ನಗರ ಸಭೆಯ ನೂತನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಭಾಕರ ಪೂಜಾರಿ ಅವರು ನಮ್ಮೊಡನೆ ಇರುವುದು ನಿಜವಾಗಿಯೂ ಖುಷಿಯ ಸಂಗತಿಯಾಗಿದ್ದು, ಅವರಿಗೆ ನನ್ನ ಹಾಗೂ ಎಲ್ಲಾ ಸದಸ್ಯರ ಪರವಾಗಿ ಹಾರ್ದಿಕ ಸ್ವಾಗತವನ್ನು ಹೇಳಲು ಬಯಸುತ್ತೇನೆ.

ಇದಲ್ಲದೆ, ರೋಟರಿ ಜಿಲ್ಲೆ 3182ರ ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್, ಹಾಗೂ ನಮ್ಮ ಅಸೋಸಿಯೇಶನಿನ ಪೂರ್ವಾಧ್ಯಕ್ಷೆ ಹಾಗೂ ಖ್ಯಾತ ಶಿಶು ವೈದ್ಯೆ ಡಾಕ್ಟರ್ ಜಯಗೌರಿ ಅವರಿಗೆ ಕೂಡ ಹಾರ್ದಿಕ ಸ್ವಾಗತ.

ನಮ್ಮ ಉಪಾಧ್ಯಕ್ಷರಾದ ಡಾಕ್ಟರ್ ಶ್ಯಾಮಸುಂದರ್ ಭಟ್, ಕಾರ್ಯದರ್ಶಿಯಾದ ಡಾಕ್ಟರ್ ವಿನಾಯಕ ಶೆಣೈ, ಟ್ರೆಜರರ್ ಶ್ರೀ ಗಣಪತಿ ಕಾಮತ್, ಜತೆ ಕಾರ್ಯದರ್ಶಿ ಪ್ರೊ. ರಘು ಚಂದ್ರಶೇಖರ್ ಹಾಗೂ ಸಮಿತಿಯ ಎಲ್ಲಾ ಸದಸ್ಯರುಗಳಿಗೆ, ಹಿರಿಯ ಸಲಹೆಗಾರರಿಗೆ ಪ್ರೀತಿಯ ಸ್ವಾಗತವನ್ನು ಬಯಸುತ್ತೇನೆ.

ಇಂದು ನಾವು ವಿವಿಧ ಗಣ್ಯ ವ್ಯಕ್ತಿಗಳನ್ನು ಸಹ ನಮ್ಮೊಂದಿಗೆ ಕಾಣಲು ಬಹಳ ಹರ್ಷವಾಗಿದ್ದು, ರೋಟೆರಿಯನ್ ಡಾಕ್ಟರ್ ಗಿರಿಜಾ, ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ನಂದಿನಿ ಭಟ್, ಮುಂದೆ ನಮ್ಮನ್ನು ಸೇರಲಿರುವ ಶ್ರೀ ದೇವರಾಜ್, ಇನ್ಸ್‌ಪೆಕ್ಟರ್, ಮಣಿಪಾಲ ಪೊಲೀಸ್ ಸ್ಟೇಷನ್, ಮತ್ತು ಮೆಸ್ಕಾಮ್ ಮಣಿಪಾಲದ ಅಸಿಸ್ಟೆಂಟ್ ಎಕ್ಸೆಕ್ಯೂಟಿವ್ ಇಂಜಿನಿಯರ್ ಶ್ರೀ ಪ್ರಸಾಂತ್ ಪುತ್ರನ್ ಅವರನ್ನು ಗುರುತಿಸುತ್ತಾ ಹಾರ್ದಿಕ ಸ್ವಾಗತವನ್ನು ಹೇಳಲು ಹರ್ಷಿಸುತ್ತೇನೆ.

ಈಶ್ವರ ನಗರ ವಾರ್ಡಿನ ಸ್ವಚ್ಛತೆಯ ಉಸ್ತುವಾರಿ ವಹಿಸಿರುವ ಶ್ರೀ ಪ್ರಶಾಂತ್ ಹಾಗೂ ಬೀದಿ ದೀಪದ ಜವಾಬ್ದಾರಿ ಹೊತ್ತಿರುವ ಶ್ರೀ ರಮೇಶ ಶೆಟ್ಟಿಗಾರ್ ಕೂಡ ನಮ್ಮೊಂದಿಗಿದ್ದಾರೆ. ಇವರಿಗೂ ಮತ್ತು ಆಗಮಿಸಿದ ಪೌರ ಕಾರ್ಮಿಕರಿಗೂ ವಿಶೇಷ ಸ್ವಾಗತವನ್ನು ಬಯಸುತ್ತೇನೆ.

ಈಶ್ವರ ನಗರದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳನ್ನು ಈ ದಿನದ ವಿಶೇಷ ಸಂದರ್ಭದಲ್ಲಿ ಸನ್ಮಾನಿಸುತ್ತಿದ್ದೇವೆ. ಕರ್ನಲ್ ಮಾಧವ ಶಾನುಭಾಗ್, ಶ್ರೀ ಪ್ರಕಾಶ ಶೆಣೈ, ಶ್ರೀನಾಥ ಮಣಿಪಾಲ ಹಾಗೂ ಶ್ರೀಮತಿ ಗುಲಾಬಿ ಕೋಟ್ಯಾನ್ ಇವರಿಗೆ ನಮ್ಮ ಹೃತ್ಪೂರ್ವಕವಾದ ಪ್ರೀತಿ ಮತ್ತು ಗೌರವವನ್ನು ಸಲ್ಲಿಸುತ್ತೇನೆ.

ನಮ್ಮ ಅಸೋಸಿಯೇಶನ್‌ನ ಎಲ್ಲಾ ಸದಸ್ಯರು, ಅವರ ಕುಟುಂಬ ಸದಸ್ಯರು ಹಾಗೂ ಈಶ್ವರನಗರ ನಿವಾಸಿಗಳಿಗೆ ಹಾರ್ದಿಕ ಸ್ವಾಗತವನ್ನು ಹೇಳಲು ಬಯಸುತ್ತೇನೆ.

ನಮ್ಮ ಅಸೋಸಿಯೇಶನ್‌ನ ಮುಖ್ಯ ಉದ್ದೇಶ ಈಶ್ವರನಗರ ನಿವಾಸಿಗಳಲ್ಲಿ ಪರಸ್ಪರ ಸ್ನೇಹ ಮತ್ತು ಭ್ರಾತೃತ್ವವನ್ನು ವೃದ್ಧಿಸುತ್ತ, ಈಶ್ವರ ನಗರದ ಪರಿಸರ ಸ್ವಚ್ಚತೆ, ಸುರಕ್ಷತೆ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಒಂದು ಸಮಗ್ರ ಸಂಘಟನೆಯಾಗಿ ನಿರ್ವಹಿಸುತ್ತಿದೆ. ನಮ್ಮಲ್ಲಿ ಕಂಡುಬರುವ ಕುಂದು ಕೊರತೆಗಳನ್ನು ಸರಿಪಡಿಸಿ ಸರ್ವತೋಮುಖ ಅಭಿವೃದ್ದಿ ಸಾಧಿಸುವುದೇ ನಮ್ಮ ಗುರಿ.


ಈ ಎಲ್ಲ ಸಾಧನೆಗಳು, ಈ ಸಂಘಟನೆಯ ಎಲ್ಲ ಸದಸ್ಯರ ಒಟ್ಟು ಪ್ರಯತ್ನದಿಂದ ಮಾತ್ರ ಸಾಧ್ಯವಾಗುತ್ತವೆ. ಕಳೆದ 18 ವರ್ಷಗಳಲ್ಲಿ ಹಲವಾರು ಉತ್ತಮ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ, ನಮ್ಮ ಅಸೋಸಿಯೇಶನ್ ಅನ್ನು ಇನ್ನಷ್ಟು ಕ್ರಿಯಾಶೀಲ ಸಂಘಟನೆಯಾಗಿ ಬೆಳೆಯಲು ಶ್ರಮಿಸಿದ ಹಿಂದಿನ ಅಧ್ಯಕ್ಷರುಗಳು ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರುಗಳಿಗೆ ನನ್ನ ಮನದಾಳದ ಅಭಿನಂದನೆ ಮತ್ತು ಅಭಿವಂದನೆಗಳನ್ನು ಸಲ್ಲಿಸುತ್ತೇನೆ.

2023-24 ನೇ ಸಾಲಿನಲ್ಲಿ ನಮ್ಮ ಅಸೋಸಿಯೇಶನ್‌ನ ಕಾರ್ಯಚಟುವಟಿಕೆಗಳ ಕುರಿತು ನಮ್ಮ ಕಾರ್ಯದರ್ಶಿಯವರು ನಿಮಗೆ ವಿವರಿಸಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ವಾರ್ತಾಪತ್ರಿಕೆ "ಸಮರಸ್ಯ" ಅನ್ನು ಬಿಡುಗಡೆಗೊಳಿಸುತ್ತಿದ್ದೇವೆ, ಇದು ನಮ್ಮ ಅಸೋಸಿಯೇಶನ್‌ನ ಚಟುವಟಿಕೆಗಳ ಬಗ್ಗೆ ನಿಮಗೆ ವಿವರ ನೀಡಲಿದೆ.

ನಮ್ಮ ಅಸೋಸಿಯೇಶನ್‌ನಲ್ಲಿ ಈ ವರ್ಷದಿಂದ ಒಂದು ಪ್ರಮುಖ ನಿರ್ಣಯ ಮಾಡಲಾಗಿದೆ - ಈಗ ಮನೆಯ ಎಲ್ಲಾ ವಯಸ್ಕ ಸದಸ್ಯರು ಸಹ ಅಸೋಸಿಯೇಶನ್‌ನ ಸದಸ್ಯತ್ವವನ್ನು ಪಡೆಯಲು ಅರ್ಹರಾಗಿದ್ದಾರೆ. ಇದುವರೆಗೆ ಇದು ಯಜಮಾನರಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಈ ವರ್ಷದ ಆರಂಭದಿಂದ ಎಲ್ಲ ವಯಸ್ಕ ಸದಸ್ಯರುಗಳಿಗೂ ಇದು ಅನ್ವಯಿಸಲಾಗಿದೆ.

ಕಳೆದ ವರ್ಷದಲ್ಲಿ ಕೆಲವು ಉದಾರ ದಾನಿಗಳ ಸಹಕಾರದಿಂದ ಹಲವಾರು ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಯಿತು. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನಾವು ಮುಂದಿನ ವರ್ಷದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸ ಮತ್ತು ಇನ್ನಿತರ ಕಾರ್ಯಗಳನ್ನು ಹಮ್ಮಿಕೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ.”‌ ಎಂದು ಹೇಳಿದರು.

7.     ಕಾರ್ಯದರ್ಶಿಯ ವರದಿ:

2023-24ರಲ್ಲಿ ನಡೆದ ಎಲ್ಲಾ ಮುಖ್ಯ ಕಾರ್ಯಕ್ರಮಗಳಾದ ಸ್ವಚ್ಛತಾ ಅಭಿಯಾನ, ಆರೋಗ್ಯ ಶಿಬಿರ, ಸನ್ಮಾನ ಕಾರ್ಯಕ್ರಮಗಳನ್ನು ಡಾ. ವಿನಾಯಕ್ ಶೆಣೈ ವಿವರಿಸಿದರು. "ERWAಯು ನಗರದಲ್ಲಿ ಸತತವಾಗಿ ಅಭಿವೃದ್ಧಿ, ಸ್ವಚ್ಛತೆ ಮತ್ತು ಸಮುದಾಯದ ಒಗ್ಗಟ್ಟಿಗೆ ಶ್ರಮಿಸುತ್ತಿದೆ," ಎಂದು ವಿವರಿಸಿದರು. ಅವರ ಸಂಪೂರ್ಣ ವರದಿಯನ್ನು ಈ ಕೆಳಗೆ ನೀಡಲಾಗಿದೆ:

“ಇವತ್ತಿನ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾದ ಉಡುಪಿ ನಗರಸಭೆಯ  ಅಧ್ಯಕ್ಷರಾದ ಶ್ರೀ ಪ್ರಭಾಕರ್ ಪೂಜಾರಿಯವರೇ, ERWA ದ ಅಧ್ಯಕ್ಷರಾದ ಶ್ರೀ ರಾಜವರ್ಮ ಆರಿಗರೇ, ಕೋಶಾಧಿಕಾರಿಗಳಾದ  ಶ್ರೀ ಗಣಪತಿ ಕಾಮತ್ ರೇ,  ಉಪಾಧ್ಯಕ್ಷರಾದ ಡಾ।। ಶ್ಯಾಮಸುಂದರ್ ಭಟ್ಟರೇ, ಜೊತೆಕಾರ್ಯದರ್ಶಿಗಳಾದ ಶ್ರೀ ರಘುಚಂದ್ರಶೇಖರ್ ರೇ, ಈಶ್ವರನಗರ ಸಮಿತಿಯ ಎಲ್ಲ ಸದಸ್ಯರೇ , ಕೌನ್ಸಿಲರ್ ಶ್ರೀ ಮಂಜುನಾಥ್ ಮಣಿಪಾಲ ಇವರೇ ಹಾಗೂ ಈ ವಾರ್ಡಿನ ಎಲ್ಲ ನಾಗಾರಿಕ ಬಂಧುಗಳೇ . ನಿಮ್ಮೆಲ್ಲರಿಗೂ ಹಾರ್ದಿಕ ವಂದನೆಗಳನ್ನು ಅರ್ಪಿಸಿ   ERWA ದ ಗತವರ್ಷದ ವರದಿಯನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುತಿದ್ದೇನೆ. 

7.1.       ವಾರ್ಷಿಕ ಸಾಮಾನ್ಯ ಸಭೆ (AGM):

09-09-2023ರಂದು ಇದೇ ಸಭಾಭವನದಲ್ಲಿ ಜರಗಿತು. ಹೊಸದಾಗಿ ಚುನಾಯಿತ ಸಮಿತಿ ಹೊಸ ಅಧ್ಯಕ್ಷ ಶ್ರೀ ರಾಜವರ್ಮ ಆರಿಗರ ನೇತೃತ್ವದಲ್ಲಿ ಈ ಹಿಂದಿನ ಸಮಿತಿಯಿಂದ ಅಧಿಕಾರ ಸ್ವೀಕಾರ ಮಾಡಿತು. ಈ ಸಂದರ್ಭದಲ್ಲಿ ನಮ್ಮ ವಾರ್ಡಿನ  ನಾಲ್ವರು ವಿಶಿಷ್ಟವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

·   ಶ್ರೀಯುತ ತಿರುಮಲೇಶ್ವರ ಭಟ್ - ನಿವೃತ್ತ ಆಂಗ್ಲಭಾಷಾ ಪ್ರಾಧ್ಯಾಪಕರು  ಹಾಗೂ ಸಾಹಿತಿಗಳು.

·  ಶ್ರೀ ಮುದ್ದುನಾಯ್ಕ್ - ತಮ್ಮ ಪುಟ್ಟ ಅಂಗಡಿ, ಮನೆ ಪರಿಸರವನ್ನು  ಅತ್ಯಂತ ಸ್ವಚ್ಛತೆಯಿಂದ ನೋಡಿಕೊಳ್ಳುವರು.

·   ಶ್ರೀ ಶ್ರೀಧರ - ವಾರ್ಡಿನ ಹಿರಿಯರು, ನಿವೃತ್ತ ಬ್ಯಾಂಕ್ ಅಧಿಕಾರಿಗಳು ಹಾಗೂ ಜನಾನುರಾಗಿಗಳು, ಸಮಾಜಸೇವಕರು.

·   ಡಾ ।। ಬಿ.ಎನ್ .ಪೈ - ಸಾಗರದಲ್ಲಿ 50 ವರ್ಷಗಳಿಗೂ ಮಿಕ್ಕಿದ   ವೈದ್ಯಕೀಯ ಸೇವೆ ಸಲ್ಲಿಸಿ ನಿವೃತ್ತಿ ಜೀವನವನ್ನು ಈಶ್ವರನಗರದಲ್ಲಿ ಕಳೆಯುತಿದ್ದಾರೆ. ಪರಿಸರ ಸ್ವಚ್ಛತೆ, ಸಂರಕ್ಷಣೆ ಮನೆಯ ಸುತ್ತಮುತ್ತ ಹಸಿರು ತೋಟವನ್ನು ಮಾಡಿ ಪರಿಸರದ ಎಲ್ಲರಿಗೂ ಮಾರ್ಗದರ್ಶಕರಾಗಿ ಜನಾನುರಾಗಿಯಾಗಿದ್ದರೆ. ಶ್ರೀ ಶ್ರೀಧರ ಹಾಗೂ ಡಾ ।। ಬಿ.ಎಸ್ .ಪೈ ಯವರು ಕಾರ್ಯಕ್ರಮಕ್ಕೆ ಕಾರಣಾಂತರದಿಂದ ಬರಲು ಅಸಾಧ್ಯವಾದ ಕಾರಣ ಅವರ ಮನೆಗಳಲ್ಲೆ  ERWA ವತಿಯಿಂದ ಸನ್ಮಾನಿಸಲಾಯಿತು .

7.2.       ಸ್ವಚ್ಛ ಈಶ್ವರ ನಗರ

ಸ್ವಚ್ಛ ಈಶ್ವರ ನಗರದ ಘೊಷಣೆಯೊಂದಿಗೆ 28/09/2023ರಂದು ERWA ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯ ಸದಸ್ಯರ ಹಾಗೂ ನಾಗರಿಕರ ಸಹಕಾರದೊಂದಿಗೆ ನಗರಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ತಾ 29/10/2023ರಂದು ನಗರಸಭಾ ಆಯುಕ್ತ ಡಾ|| ರಾಯಪ್ಪ  ಇವರ ಉಪಸ್ಥಿತಿಯಲ್ಲಿ ಸದಸ್ಯರ, ನಾಗರಿಕರ  ಹಾಗೂ ನಗರಸಭೆಯ ಸ್ವಚ್ಛತಾ ನೌಕರರ ಸಹಕಾರದೊಂದಿಗೆ ಒಂದು ದಿನದ ಸ್ವಚ್ಚತಾ ಕಾರ್ಯಕ್ರಮ  ನಡೆಸಲಾಯಿತು . ಈಶ್ವರನಗರವನ್ನು ಪ್ಲಾಸ್ಟಿಕ್ ಮುಕ್ತ, ಸ್ವಚ್ಛ ವಾರ್ಡನ್ನಾಗಿಸಲು ಸಂಕಲ್ಪ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸ್ವಚ್ಚತೆಗೆ ಆದ್ಯತೆಕೊಟ್ಟು ಹೆಸರುವಾಸಿಯಾದ ಡಾ|| ರಾಯಪ್ಪ ನವರನ್ನು ಹಾಗೂ ನಗರಸಭೆಯ ಅರೋಗ್ಯ ಪರಿವೀಕ್ಷಕರನ್ನು ಸನ್ಮಾನಿಸಲಾಯಿತು.

7.3.       ಅರೋಗ್ಯ ಶಿಬಿರ: 

ERWA ದ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಿಂದ     03-03-2024ರಂದು ಈಶ್ವರನಗರದ ಡಾ| ಟಿ.ಎಂ.ಎ .ಪೈ ಪಾಲಿಟೆಕ್ನಿಕ್ ನಲ್ಲಿ ಒಂದು ದಿನದ ಉಚಿತ ಅರೋಗ್ಯ ಶಿಬಿರವನ್ನು ನಡೆಸಲಾಯಿತು. ಶಿಬಿರದಲ್ಲಿ ಮುಖ್ಯವಾಗಿ ಸಾಮಾನ್ಯ ಅರೋಗ್ಯ ತಪಾಸಣೆ, ಮಧುಮೇಹ ತಪಾಸಣೆ, ನೇತ್ರ ತಪಾಸಣೆ  ನಡೆಸಲಾಯಿತು. ಸುಮಾರು 150ಕ್ಕೂ ಮಿಕ್ಕಿದ ನಗರವಾಸಿಗಳ ಹಾಗೂ ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಂಡರು.ದಾನಿಗಳು ಕೊಡಮಾಡಿದ ಕನ್ನಡಕವನ್ನು ಸುಮಾರು 90 ಜನರಿಗೆ ವಿತರಿಸಲಾಯಿತು. ಡಾ| ಅರುಣಾ ಮಯ್ಯ ಶಿಬಿರದ ಮುಖ್ಯ ಸಂಯೋಜಕರಾಗಿದ್ದರು.

7.4.       ಈಶ್ವರನಗರ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಯ ಉದ್ಘಾಟಣೆ:

ಉಡುಪಿ ಕ್ಷೇತ್ರದ ಶಾಸಕರಾದ ಶ್ರೀ ಯಶಪಾಲ್ ಸುವರ್ಣರಿಂದ ತಾ. 08-02-2027ರಂದು ನಡೆಯಿತು. ಸುಮಾರು 99 ಲಕ್ಷದ ಕಾಮಗಾರಿ ನಗರ ರಸ್ತೆ ಡಾಂಬರೀಕರಣ ಯೋಜನೆಯಡಿ ಸಂಪನ್ನಗೊಂಡಿತು. ಸಂದರ್ಭ ಶಾಸಕರನ್ನು ಗೌರವಪೂರ್ವಕ ಸನ್ಮಾನಿಸಲಾಯಿತು ಹಾಗೂ ಈಶ್ವರನಗರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅವರ ಸಹಕಾರವನ್ನು ವಾರ್ಡಿನ ಕೌನ್ಸಿರಲ್ ಶ್ರೀ ಮಂಜುನಾಥರು ಈ ವೇದಿಕೆಯಲ್ಲಿ ಮುತುವರ್ಜಿಯಿಂದ ಕೋರಲಾಯಿತು. ವಾರ್ಡಿನ ಕೌನ್ಸಿರಲ್ ಶ್ರೀ ಮಂಜುನಾಥ ಮಣಿಪಾಲ ಈ ಕಾಮಗಾರಿಯ ಅನುಷ್ಠಾನಕ್ಕೆ ತುಂಬಾ ಶ್ರಮಿಸಿದ್ದಾರೆ.

7.5.       ವಿಶ್ವಯೋಗ ದಿನಾಚರಣೆ:

ERWA ದ ವತಿಯಿಂದ ಪತಂಜಲಿ ಯೋಗಪೀಠದ ಸಹಯೋಗದೊಂದಿಗೆ ಜುಲೈ 21 ರಂದು ಡಾ| ಟಿ.ಎಂ.ಎ .ಪೈ ಪಾಲಿಟೆಕ್ನಿಕ್ ನಲ್ಲಿ ಯೋಗದ ಪ್ರಾತ್ಯಕ್ಷಿಕತೆಯನ್ನು ಹಾಗೂ ಯೋಗದಿಂದಾಗುವ ಸಾಧಕಗಳ ಬಗ್ಗೆ ಮಾಹಿತಿ ಶಿಬಿರ ನಡೆಯಿತು.

7.6.       ವನಮಹೋತ್ಸವ ಆಚರಣೆ:

ತಾ. 01/09/2024ರಂದು ಆಯ್ದ ಸರಕಾರಿ ಜಾಗಗಳಲ್ಲಿ ದಾನಿಗಳ ಸಹಕಾರದೊಂದಿಗೆ  ERWA ದ ವತಿಯಿಂದ ಪರಿಸರ ಸಂರಕ್ಷಣೆಗಾಗಿ  ಗಿಡಗಳ ನಡುವಿಕೆ  ಕಾರ್ಯಕ್ರಮ ನಡೆಸಲಾಯಿತು. ಅಧ್ಯಕ್ಷ ಶ್ರೀ ರಾಜವರ್ಮ ಆರಿಗ, ಕೋಶಾಧಿಕಾರಿ ಶ್ರೀ ಗಣಪತಿ ಕಾಮತ್, ಡಾ||  ಯಜ್ನೇಶ್   ಶರ್ಮ, ಕರ್ನಲ್ ಮಾಧವ ಶ್ಯಾನುಭಾಗ್, ಶ್ರೀಮತಿ ಸುಶೀಲ ಪೂಂಜಾ, ಶ್ರೀ ಬಾಲಚಂದ್ರ ಮುನಿಯಾಲ್ , ಶ್ರೀ ರಘುಚಂದ್ರ ಶೇಖರ್, ಡಾ||  ಶ್ಯಾಮಸುಂದರ್ ಭಟ್, ಶ್ರೀ ಜಯಂತ್ ನಾಯಕ್ ಕಾಪಾಡಿ  ಇವರುಗಳು ಈ ಕಾರ್ಯಕ್ರಮದಲ್ಲಿ ತನು , ಮನ, ಧನ , ಸಹಿತ ಸಕ್ರಿಯವಾಗಿ ಪಾಲ್ಗೊಂಡರು .  

7.7.       ಈಶ್ವರನಗರ ಬಸ್ಸು ತಂಗುದಾಣ ನಿರ್ಮಾಣ :

ಈಶ್ವರನಗರ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅತ್ಯವಶ್ಯಕವಿರುವ  ಬಸ್ಸು ತಂಗುದಾಣ ನಿರ್ಮಾಣಕ್ಕೆ ERWA ದ ವತಿಯಿಂದ ನಗರಸಭೆಯ ಆಯುಕ್ತರನ್ನು ಭೇಟಿಯಾಗಿ ವಿನಂತಿ ಪತ್ರವನ್ನು ಸಲ್ಲಿಸಲಾಯಿತು. ಕೌನ್ಸಿಲರ್ ಮುಖಾಂತರ ಅದರ ಕಾಮಗಾರಿ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗಿತು. ಆಯುಕ್ತರು ಶೀಘ್ರದಲ್ಲೇ ತಂಗುದಾಣ ನಿರ್ಮಿಸಿಕೂಡುತ್ತೆನೆಂದು ಭರವಸೆ ಕೊಟ್ಟರೂ ಈ ಈಡೇರಿಸಲಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಅದು ನೆನೆಗುದಿಗೆ ಬಿದ್ದಿತ್ತು. ಇದೀಗ ಹೊಸದಾಗಿ ಚುನಾಯಿತರಾದ ನಗರಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿಯವರು ನಮ್ಮ ವಿನಂತಿಯನ್ನು ಪರಿಗಣಿಸಿ ಶೀಘ್ರದಲ್ಲೇ  ತಂಗುದಾಣ ನಿರ್ಮಿಸುವ ಭರವಸೆ ಕೊಟ್ಟಿದ್ದಾರೆ. ಸಧ್ಯದಲ್ಲೆ ಅದನ್ನು ಕಾರ್ಯರೂಪಕ್ಕೆ ತರುವಂತೆ ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷರನ್ನು ಮತೊಮ್ಮೆ ವಾರ್ಡಿನ  ನಾಗರಿಕರ ಪರವಾಗಿ ವಿನಂತಿ ಮಾಡಿಕೊಳ್ಳುತ್ತೇನೆ.

7.8.       ಮಕ್ಕಳ ಉದ್ಯಾನ ನಿರ್ಮಾಣ:

ವಾರ್ಡಿನ ಮಕ್ಕಳಿಗಾಗಿ ಚಿಕ್ಕ ಉದ್ಯಾನ ನಿರ್ಮಾಣಕ್ಕಾಗಿ ERWA ವತಿಯಿಂದ ಕಳೆದ ಹಲವಾರು ವರುಷಗಳಿಂದ ಪ್ರಯತ್ನ ನಡೆಯುತ್ತಾ ಇದೆ. ನಗರಸಭೆ ಹಾಗೂ ಜಿಲ್ಲಾಧಿಕಾರಿಯವರಿಗೆ ಬಗ್ಗೆ ಸರಕಾರಿ ಜಾಗದಲ್ಲಿ ಮಕ್ಕಳ ಉದ್ಯಾನ ನಿರ್ಮಾಣಕ್ಕೆ ವಿನಂತಿ ಪತ್ರವನ್ನು ಕೊಟ್ಟಿದ್ದೇವೆ. ಸಮರ್ಪಕವಾದ ಸರಕಾರಿ ಜಾಗವಿಲ್ಲದ ಕಾರಣ, ಕಾರ್ಯ ನೆನೆಗುದಿಗೆ ಬಿದ್ದಿದೆ.

7.9.       ಕುಡಿಯುವ ನೀರಿನ ಸರಬರಾಜು:

ಬೇಸಗೆಯ ಸಮಯದಲ್ಲಿ ಬಜೆ ಡ್ಯಾಮ್ ನಲ್ಲಿ ನೀರಿನ ಸಂಗ್ರಹ ಕಡಿಮೆಯಾದಾಗ ಅಥವಾ ತಾಂತ್ರಿಕ ದೋಷಗಳು ಬಂದಾಗ ನೀರುಸರಬರಾಜು ವ್ಯತ್ಯಯವಾಗುವುದು ಸಹಜ. ಆದರೆ ಮಳೆಗಾಲದಲ್ಲಿ ಯಥೇಚ್ಛ ನೀರಿನ ಆಶ್ರಯವಿದ್ದಾಗಲು ನಮ್ಮ ವಾರ್ಡಿಗೆ ಕಳೆದೊಂದು ವರ್ಷದಿಂದ ರಾತ್ರಿ 10 ಘಂಟೆಯ ನಂತರವೇ ಕುಡಿಯುವ ನೀರಿನ ಸರಬರಾಜು ಆಗುತ್ತಾ ಇದೆ. ವಾರ್ಡಿನಲ್ಲಿ ಹಿರಿಯ ನಾಗರಿಕರು ಗಣನೀಯ ಸಂಖ್ಯೆಯಲ್ಲಿದ್ದು ನೀರಿನ ಟ್ಯಾಂಕ್ ನಲ್ಲಿ ನೀರು ತಂಬಿಸಿಕೊಳ್ಳಲು ರಾತ್ರಿ 11.30-12.00 ಘಂಟೆಯವರೆಗೂ ನಿದ್ದೆಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಪ್ರಯೋಜನಗಳಿಲ್ಲ. ಇದೀಗ ಶ್ರೀ ಪ್ರಭಾಕರ್ ಪೂಜಾರಿಯವರು ಈ ದಿಶೆಯಲ್ಲಿ ಪ್ರಯತ್ನ ಮಾಡಿ, ಹಗಲು ವೇಳೆಯಲ್ಲಿ ನೀರು ಸರಬರಾಜು ಮಾಡಿ ಸಹಕರಿಸುವಂತೆ ಅವರನ್ನು ವಿನಂತಿಸಿಕೊಂಡಿದ್ದೇವೆ.

7.10.    ನೀರಿನ ದರದಲ್ಲಿ ಏರಿಕೆ:

ವಾರಾಹಿ ನೀರು ಸರಬರಾಜು ಯೋಜನೇ ಮಾಡಿ, ಹೊಸನೀರಿನ ಮೀಟರ್ ಅಳವಡಿಕೆಯಾದಾಗಿನಿಂದ ಈಶ್ವರನಗರ್ಡ್ ಎಲ್ಲ ಮನೆಗಳ ನೀರಿನ ಬಿಲ್ 3-4ಪಟ್ಟು ಜಾಸ್ತಿ ಬರುತ್ತಾ ಇದೆ ಎಂದು ಹೆಚ್ಚಿನ ನಾಗರಿಕರಿಂದ ದೂರುಗಳು ಬಂದಿವೆ. ದರ ಏರೀಕೆಯಿಂದಲೋ ಅಥವಾ ಮೀಟರ್ ನ ತಾಂತ್ರಿಕ ದೋಷದಿಂದಲೋ ನಾಗರಿಕರಿಗೆ ಸತತವಾಗಿ ಪ್ರತಿ ತಿಂಗಳು ಜಾಸ್ತಿ  ಬಿಲ್ ಬಂದು ತೊಂದರೆಯಾಗುತ್ತಾ ಇದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ನಗರಸಭಾಧ್ಯಕ್ಷರಿಗೆ ನೀರಿನ ಬಿಲ್ಲಿನ ದೋಷಸರಿಪಡಿಸುವಂತೆ ಕ್ರಮಕೈಗೊಳ್ಳಲು ವಿನಂತಿ ಮಾಡಿಕೊಂಡಿದ್ದೇವೆ.

7.11.    ರಸ್ತೆದೀಪಗಳ ದುರಸ್ಥಿ ಸಮಸ್ಯೆ:

ರಸ್ತೆದೀಪಗಳ ದುರಸ್ಥಿ, ಬಲ್ಬುಗಳ ಜೋಡಣೆ ಕಾರ್ಯ, ನಾಗರಿಕರ ದೂರುಗಳ ಹೊರತಾಗಿಯೂ ಬಹಳ ವಿಳಂಬವಾಗಿ ನಡೆಯುತಲಿತ್ತು. ಇದೀಗ ಸ್ಥಳೀಯ ಎಲೆಕ್ಟ್ರಿಷಿಯನ್ ಶ್ರೀ ರಮೇಶ್ ಶೆಟ್ಟಿಗಾರರಿಗೆ ದೀಪಗಳ ದುರಸ್ತಿ ಕಾರ್ಯದ ಜವಾಬ್ದಾರಿ ಕೊಡಲಾಗಿದೆ ಎಂದು ನಗರಸಭಾ ಸದಸ್ಯರಾದ  ಶ್ರೀ ಮಂಜುನಾಥ ಮಣಿಪಾಲ ತಿಳಿಸಿದ್ದಾರೆ ಹಾಗೂ ರಮೇಶ್ ಶೆಟ್ಟಿಗಾರರು ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನಾಗರಿಕರಿಗೆ ಅವರ ಫೋನ್ ನಂಬರ್ನ್ನು ತಿಳಿಸಲಾಗಿದೆ.

ಈಶ್ವರನಗರ ಮುಖ್ಯರಸ್ಥೆಯ ಹಾಗೂ ಇತರ್ ರಸ್ತೆಗಳ   ಬದಿಯ  ಚರಂಡಿ ನಿರ್ಮಾಣ ಕಾರ್ಯ, ಪಾದಚಾರಿ ರಸ್ತೆ (ಪುಟ್ ಪಾತ್ )ನಿರ್ಮಾಣ ಕಾರ್ಯದ ಬಗ್ಗೆ ನಗರಸಭಾ ಸದಸ್ಯರ ಮುಖಾಂತರ  ನಗರಸಭೆಗೆ ವಿನಂತಿ ಪತ್ರವನ್ನು ಕೊಡಲಾಗಿದೆ.

ಈಶ್ವರನಗರವನ್ನು ಪರಿಸರಪ್ರೇಮಿ, ಸಾಮರಸ್ಯ ಪ್ರತಿಪಾದಕ, ಆರೋಗ್ಯವಂತ, ಆದರ್ಶ ವಾರ್ಡನ್ನಾಗಿಸಲು ERWA ಶ್ರಮಿಸುತ್ತಿದೆ. ಸೇವಾಕಾರ್ಯದಲ್ಲಿ ಸಮಿತಿಯೊಂದಿಗೆ ಕೈಜೋಡಿಸಿದ ನಗರಸಭಾ ಸದಸ್ಯರು ಶ್ರೀ ಮಂಜುನಾಥ ಮಣಿಪಾಲ ಇವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.  ERWA ಎಲ್ಲಾ     ಚಟುವಟಿಕೆಗಳ ವರದಿಯನ್ನು ಸುಂದರವಾಗಿ ಕಾಲಕಾಲಕ್ಕೆ ERWA BLOG ಮೂಲಕ ಪ್ರಕಟಿಸಿ ಸಹಕರಿಸುತ್ತಿರುವ ಡಾ|| ಸುರೇಶ್ರಮಣ ಮಯ್ಯ, ವಾರ್ಡಿನ ಹಿತಕ್ಕಾಗಿ ಬಹಳ ಮುತುವರ್ಜಿಯಿಂದ ಸೇವೆಸಲ್ಲಿಸುತ್ತಿರುವ ERWA ಅಧ್ಯಕ್ಷ ಶ್ರೀ ರಾಜವರ್ಮ ಆರಿಗ, ಕೋಶಾಧಿಕಾರಿ ಶ್ರೀ ಗಣಪತಿ ಕಾಮತ್ ಸಹಿತ ಎಲ್ಲಾ ಪದಾಧಿಕಾರಿಗಳು ಹಾಗೂ ಹಿತೈಷಿಗಳಿಗೆ ನಗರನಿವಾಸಿಗಳ ಪರವಾಗಿ ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.”

8.     ಹಣಕಾಸಿನ ವರದಿ:

ಅಸೋಸಿಯೇಶನ್‌ನ ಖಜಾಂಚಿಯಾಗಿರುವ ಶ್ರೀ ಗಣಪತಿ ಕಾಮತ್ ಅವರು ಅಸೋಸಿಯೇಶನ್‌ನ ಲೆಕ್ಕ ಪರಿಶೋಧಕರಿಂದ ಅನುಮೋದಿಸಲ್ಪಟ್ಟ ಲೆಕ್ಕಪತ್ರಗಳನ್ನು ಮಂಡಿಸಿದರು. "ನಮ್ಮ ಸಂಘಟನೆಯ ಎಲ್ಲಾ ಹಣಕಾಸು ವ್ಯವಹಾರಗಳು ಪಾರದರ್ಶಕವಾಗಿದ್ದು, ಸಮಿತಿಯು ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಅರ್ಥಪೂರ್ಣವಾಗಿ ಬಳಸುತ್ತಾ ಬಂದಿದೆ," ಎಂದು ಹೇಳಿದರು. ಈಶ್ವರ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿಯ 2024ರ ಹಣಕಾಸು ಲೆಕ್ಕಪತ್ರದಲ್ಲಿ ಒಟ್ಟಾರೆ ಆದಾಯ ಮತ್ತು ವೆಚ್ಚಗಳು ಪಾರದರ್ಶಕವಾಗಿ ನಿರ್ವಹಿಸಲ್ಪಟ್ಟಿದ್ದು, ಶೇಖರಿತ ಹಣವು ಸಮಿತಿಯ ಮುಂದಿನ ಸೇವಾ ಚಟುವಟಿಕೆಗಳಿಗೆ ಸಹಾಯ ಮಾಡುತ್ತದೆ.

9.     ಮುಖ್ಯ ಅತಿಥಿಯ ಭಾಷಣ:

ನಮ್ಮ ಮುಖ್ಯ ಅತಿಥಿ ಶ್ರೀ ಪ್ರಭಾಕರ ಪೂಜಾರಿ, ಉಡುಪಿ ನಗರಸಭೆಯ ಅಧ್ಯಕ್ಷರು, ತಮ್ಮ ಭಾಷಣದಲ್ಲಿ ಸಮುದಾಯದ ಏಳ್ಗೆ ಮತ್ತು ಅಭಿವೃದ್ಧಿಯ ಮಹತ್ವವನ್ನು ವಿವರಿಸಿದರು.

"ಸಮಾಜದ ಏಳ್ಗೆ ಸಹಕಾರಿ ಕೆಲಸಗಳಿಂದ ಸಾಧ್ಯವಾಗುತ್ತದೆ. ಈಶ್ವರ ನಗರದ ಅಭಿವೃದ್ಧಿಗೆ ಇಂತಹ ಸಂಸ್ಥೆಗಳು ಮಹತ್ವದ ಕೊಡುಗೆ ನೀಡುತ್ತಿವೆ. ನಗರದ ಹಿತಚಿಂತನೆಗಳಿಗೆ ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕು" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಮಂಜುನಾಥ ಮಣಿಪಾಲ, ಈಶ್ವರ ನಗರ ವಾರ್ಡಿನ ಕೌನ್ಸಿಲರ್‌ ಆಗಿ, ಈಶ್ವರ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿಯ (ERWA) ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಾರ್ಯಕಾರಿ ಸಮಿತಿಯ ಎಲ್ಲಾ ಸಭೆಗಳಿಗೆ ವಿಶೇಷ ಅತಿಥಿಯಾಗಿ, ಅವರು ನಿರಂತರವಾಗಿ ಸಮಿತಿಯ ಪ್ರಯತ್ನಗಳಿಗೆ ಬೆಂಬಲ ನೀಡಿದ್ದಾರೆ. ವಿಶೇಷವಾಗಿ, ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿಯವರನ್ನು ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾದ್ಯಮಾಡಿದಲ್ಲಿ ಶ್ರೀ ಮಂಜುನಾಥರ ಪಾತ್ರ ಬಹಳ ಮುಖ್ಯವಾಗಿದೆ.

ಈ ಸಂದರ್ಭದಲ್ಲಿ, ಶ್ರೀ ಮಂಜುನಾಥ ಮಣಿಪಾಲ ವೇದಿಕೆಯಲ್ಲಿ ಉಪಸ್ಥಿತ ಗಣ್ಯ ಅತಿಥಿಗಳೊಂದಿಗೆ ಶ್ರೀ ಪ್ರಭಾಕರ ಪೂಜಾರಿಯವರನ್ನು ಸನ್ಮಾನಿಸಿದರು.

10.  ಸಾಮರಸ್ಯ, ERWA Newsletter ಬಿಡುಗಡೆ

ಇಂದು, ಈಶ್ವರ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಅಸೋಸಿಯೇಶನ್ (ERWA) ತನ್ನ ಸಮುದಾಯದೊಂದಿಗೆ ನಿಕಟವಾದ ಸಂವಹನ ಹೊಂದುವ ಮಹತ್ವದ ಹೆಜ್ಜೆಯಾಗಿ "ಸಾಮರಸ್ಯ" ಎಂಬ ಹೊಸ ನ್ಯೂಸ್ಲೆಟರ್ ಅನ್ನು ಬಿಡುಗಡೆ ಮಾಡಿದೆ. ಈ ನ್ಯೂಸ್ಲೆಟರ್ ERWA ಸಮುದಾಯದ ಎಲ್ಲಾ ಸದಸ್ಯರಿಗಾಗಿ ಬಹುಮುಖ್ಯ ಮಾಹಿತಿಯ ಉಪಕರಣವಾಗಿದ್ದು, ಇದರಲ್ಲಿ ಸಂಸ್ಥೆಯ ನವೀಕರಿಸಿದ ಮಾಹಿತಿ, ನಡೆಯುತ್ತಿರುವ ಚಟುವಟಿಕೆಗಳು, ಹಾಗೂ ಮುಂದಿನ ಯೋಜನೆಗಳನ್ನು ಹಂಚಿಕೊಳ್ಳಲು ಪ್ಲಾಟ್‌ಫಾರ್ಮ್ ಒದಗಿಸುತ್ತದೆ.

"ಸಾಮರಸ್ಯ" ನ್ಯೂಸ್ಲೆಟರ್‌ನ ಇ-ಕಾಪಿ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕವಾಗಿ ಕಳುಹಿಸಲಾಗುವುದು, ಹೀಗಾಗಿ ಎಲ್ಲರು ನ್ಯೂಸ್ಲೆಟರ್‌ ಮೂಲಕ ಸಮುದಾಯದ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ಹೊಂದಿರಬಹುದು.

ನ್ಯೂಸ್ಲೆಟರ್‌ನ ಪ್ರಧಾನ ಸಂಪಾದಕರಾದ ಡಾ. ಶುಭಾ ಎಚ್.ಎನ್.ಎಸ್. ರಾವ್ ಅವರ ಮಾರ್ಗದರ್ಶನದಲ್ಲಿ ಮತ್ತು ಡಾ. ಸುರೇಶರಮಣ ಮಯ್ಯ ಸಹ-ಸಂಪಾದಕರಾಗಿ ಈ ಆವೃತ್ತಿಯನ್ನು ನಿರ್ವಹಿಸಿದ್ದಾರೆ. ಈ ಮಹತ್ವದ ಆವೃತ್ತಿಯ ಬಿಡುಗಡೆ ಕಾರ್ಯವು ನಮ್ಮ ಸಮುದಾಯದ ಹಿತಾಸಕ್ತಿಗೆ ಅನುಗುಣವಾಗಿ ಪರಿಣಮಿಸಲಿದೆ.

ERWA ನ್ಯೂಸ್ಲೆಟರ್ "ಸಮರಸ್ಯ" ಅನ್ನು ಬಿಡುಗಡೆ ಮಾಡುವ ಗೌರವವನ್ನು ಉಡುಪಿ ನಗರಸಭೆಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿಯವರು ನೆರವೇರಿಸಿದರು. “ಸಾಮರಸ್ಯ” ನ್ಯೂಸ್ಲೆಟರ್‌ನ ಇ-ಕಾಪಿಯನ್ನು ಡಾ. ಗೌರಿಯವರು ಬಿಡುಗಡೆಗೊಳಿಸಿದರು

11.  ಈಶ್ವರ ನಗರದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ

"ಈಶ್ವರ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಅಸೋಸಿಯೇಶನ್" (ERWA) ನ ವಾರ್ಷಿಕ ಸಭೆಯಲ್ಲಿ, ಹಲವು ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಜರಗಿತು. ಈ ಸನ್ಮಾನ ಕಾರ್ಯಕ್ರಮವು ನಮ್ಮ ಸಮುದಾಯದ ಮೇಲೆ ಅವರ ಸೇವೆಯ ಪರಿಣಾಮವನ್ನು ಗುರುತಿಸುವುದು ಮತ್ತು ಅವರನ್ನು ಗೌರವಿಸುವ ಮಹತ್ವದ ಕಾರ್ಯಕ್ರಮವಾಗಿದೆ.

11.1.  ಕರ್ನಲ್ ಮಾಧವ ಎಂ. ಶಾನುಭಾಗ್‌ ಅವರ ಸನ್ಮಾನ: ಪ್ರಥಮವಾಗಿ, ಭಾರತೀಯ ರಕ್ಷಣಾ ದಳದಲ್ಲಿ ನೀಡಿದ ತಮ್ಮ ಅತ್ಯುನ್ನತ ಸೇವೆಗೆ ಕರ್ನಲ್ ಮಾಧವ ಎಂ. ಶಾನುಭಾಗ್‌ ಅವರನ್ನು ಗೌರವಿಸಲಾಯಿತು. ಅವರು ದೇಶದ ಸುರಕ್ಷತೆಯಲ್ಲಿ ಮಾಡಿದ ಮಹತ್ವದ ಕೊಡುಗೆಗಾಗಿ ಅಸೋಸಿಯೇಶನ್ ಅವರ ಸೇವೆಯನ್ನು ಸ್ಮರಿಸುತ್ತಿದೆ. ಡಾ. ವಿರೂಪಾಕ್ಷ ದೇವರಮನೆ, ಉಡುಪಿ ಡಾ ಎ.ವಿ. ಬಾಳಿಗ ಮೆಮೊರಿಯಲ್ ಆಸ್ಪತ್ರೆಯ ಮನೋವೈದ್ಯರು, ಅವರನ್ನು ಪರಿಚಯಿಸಿ, ವೇದಿಕೆಯಲ್ಲಿರುವ ಗಣ್ಯರೊಡಗೂಡಿ ಸನ್ಮಾನ ಮಾಡಿದರು.

11.2. ಶ್ರೀ ಪ್ರಕಾಶ ಶೆಣೈ ಅವರ ಸನ್ಮಾನ: ಸಮಾಜಸೇವೆಯಲ್ಲಿ ನೀಡಿದ ಅತ್ಯಂತ ಪ್ರಭಾವಶಾಲಿ ಕೊಡುಗೆಗಾಗಿ ಶ್ರೀ ಪ್ರಕಾಶ ಶೆಣೈ ಅವರನ್ನು ಸನ್ಮಾನಿಸಲಾಯಿತು. ಮಣಿಪಾಲ ತಾಂತ್ರಿಕ ಸಂಸ್ಥೆಯಲ್ಲಿ ಅವರ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ ಪ್ರೊ. ಎಚ್.ಕೆ.ವಿ. ರಾವ್‌ ಅವರು ಅವರನ್ನು ಪರಿಚಯಿಸಿ, ಸನ್ಮಾನ ಮಾಡಿದರು. ಪ್ರೊ. ಎಚ್.ಕೆ.ವಿ. ರಾವ್‌ ಅವರು ಅವರು ERWA ನ ಸ್ಥಾಪಕ ಸದಸ್ಯರಾಗಿದ್ದು, ಎಲ್ಲಾ ಹುದ್ದೆಗಳನ್ನು ಆಕ್ರಮಿಸಿದ್ದಾರೆ. ಅವರ ಸೇವೆಯು ನಮ್ಮ ಸಮುದಾಯದ ಸಾಮಾಜಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆಯಾಗಿದೆ.

11.3. ಶ್ರೀ ಶ್ರೀನಾಥ್ ಮಣಿಪಾಲ ಅವರ ಸನ್ಮಾನ: ನಂತರ, ಕಲಾ ಕ್ಷೇತ್ರದಲ್ಲಿ ಮಾಡಿದ ಅದ್ಭುತ ಕೊಡುಗೆಗಾಗಿ ಶ್ರೀ ಶ್ರೀನಾಥ್ ಮಣಿಪಾಲ ಅವರನ್ನು ಗೌರವಿಸಲಾಯಿತು. ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರಖ್ಯಾತ ದೃಶ್ಯ ಕಲಾವಿದರು ಮತ್ತು ನಮ್ಮ ಅಸೋಸಿಯೇಶನ್‌ನ ಸದಸ್ಯರಾಗಿದ್ದಾರೆ. ಅವರನ್ನು ಪರಿಚಯಿಸಲು ಹಾಗೂ ಸನ್ಮಾನಿಸಲು ERWA ನ ಹಿಂದಿನ ಅಧ್ಯಕ್ಷರೂ, ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ ಪ್ರೊ. ಯಜ್ನೇಶ್ ಶರ್ಮ ಅವರನ್ ಆಹ್ವಾನಿಸಲಾಯಿತು. ಶ್ರೀನಾಥ್ ಅವರ ಕಲಾ ಸಾಧನೆಗಳು ಹಾಗೂ ಕಲಾ ಕ್ಷೇತ್ರದಲ್ಲಿ ನೀಡಿದ ಪ್ರಮುಖ ಕೊಡುಗೆಗಳ ಕುರಿತಾಗಿ ಪ್ರೊ. ಯಜ್ನೇಶ್ ಶರ್ಮರ ಮಾತುಗಳು ನಮ್ಮೆಲ್ಲರ ಮನಸ್ಸುಗಳಿಗೆ ಸ್ಪೂರ್ತಿಯನ್ನು ನೀಡಿವೆ.

11.4.  ಶ್ರೀಮತಿ ಗುಲಾಬಿ ಕೋಟ್ಯಾನ್ ಅವರ ಸನ್ಮಾನ: ಇವತ್ತು ಪರಿಸರ ಸಂರಕ್ಷಣೆಯಲ್ಲಿ ನೀಡಿದ ಮಹತ್ವದ ಸೇವೆಗೆ ಶ್ರೀಮತಿ ಗುಲಾಬಿ ಕೋಟ್ಯಾನ್ ಅವರನ್ನು ಗೌರವಿಲಾಯಿತು. ಪರಿಸರದ ಉದ್ದೇಶಗಳಿಗಾಗಿ ಅವಿರತ ಶ್ರಮ ಪಡುವ ಶ್ರೀಮತಿ ಕೋಟ್ಯಾನ್ ಅವರನ್ನು ನಮ್ಮ ಅಸೋಸಿಯೇಶನ್‌ ವಿಶೇಷವಾಗಿ ಗುರುತಿಸಿ ಅವರನ್ನು ಪರಿಚಯಿಸಲು ಮತ್ತು ಸನ್ಮಾನಿಸಲು, ERWA ಸದಸ್ಯೆ ಶ್ರೀಮತಿ ಸುಮಾ ನಾಯಕ್ ಅವರನ್ನು ಅವರು ಶ್ರೀಮತಿ ಗುಲಾಬಿ ಕೋಟ್ಯಾನ್‌ ಅವರನ್ನು ಪರಿಚಯ ಮಾಡಲು ವೇದಿಕೆಗೆ ಆಹ್ವಾನಿಸಿಲಾಯಿತು. ಪರಿಸರ ಸಂರಕ್ಷಣೆಗಾಗಿ ಮಾಡುತ್ತಿರುವ ಅವರ ಕಾರ್ಯವು ನಮ್ಮ ಸಮುದಾಯಕ್ಕೆ ಮಾದರಿಯಾಗಿದೆ.

11.5.  ಸನ್ಮಾನಿತರ ಅಭಿಪ್ರಾಯ: ಸನ್ಮಾನಿತರಾದ ಎಲ್ಲಾ ಗಣ್ಯರ ಪರವಾಗಿ ಕರ್ನಲ್‌ ಮಾಧವ ಎಂ. ಶಾನುಭಾಗ್‌ ಅವರು, ಮಾತನಾಡಿ, ಇಂತಹ ಪ್ರಶಸ್ತಿಗಳು ತಮ್ಮ ಕರ್ತವ್ಯಕ್ಕೆ ದೊರಕಿದ ಒಲವು ಎಂದು ಹೇಳಿದರು. ಅವರು ಹೇಳಿದಂತೆ, ತಮ್ಮ ಜೀವನದ ಶ್ರೇಷ್ಠ ಕ್ಷಣಗಳಲ್ಲಿ ಸಮುದಾಯದ ಸೇವೆ ಮಾಡಿದ ಪ್ರೀತಿ ಮತ್ತು ಹರ್ಷವನ್ನು ಹಂಚಿಕೊಳ್ಳುವುದು ಬಹು ಮೌಲ್ಯದಾಯಕವಾಗಿದೆ. ಇಂತಹ ಸನ್ಮಾನ ಕಾರ್ಯಕ್ರಮಗಳು ERWA ಯು ಸಮುದಾಯದ ಎಲ್ಲ ಸದಸ್ಯರನ್ನು ಒಟ್ಟುಗೂಡಿಸುವಲ್ಲಿ, ಪರಸ್ಪರ ಬಾಂಧವ್ಯವನ್ನು ಬೆಳೆಸುವಲ್ಲಿ, ಹಾಗೂ ಸೇವಾ ಮನೋಭಾವವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

12.  ನಾಗರೀಕ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಯತ್ನಿಸಿದ ಗಣ್ಯ ವ್ಯಕ್ತಿಗಳ ಸನ್ಮಾನ ಕಾರ್ಯಕ್ರಮ:

12.1.    ಈಶ್ವರ ನಗರದಲ್ಲಿ ನಾಗರೀಕ ಸೌಲಭ್ಯಗಳ ಅಭಿವೃದ್ಧಿಯ ಹಿನ್ನಲೆಯಲ್ಲಿ, ERWA ಸಮಿತಿಯು ಮಣಿಪಾಲ MSCOM ನ ಅಸಿಸ್ಟೆಂಟ್ ಎಕ್ಸೆಕ್ಯುಟಿವ್ ಇಂಜಿನಿಯರ್‌ ಆಗಿರುವ ಶ್ರೀ ಪ್ರಶಾಂತ ಪುತ್ರನ್‌ ಅವರನ್ನು ಸನ್ಮಾನಿಸಲು ನಿರ್ಧರಿಸಿತ್ತು. ಶ್ರೀ ಪುತ್ರನ್‌ ಅವರು 2003ರಿಂದಲೇ ಉಡುಪಿ ಉಪ ವಿಭಾಗದಲ್ಲಿ ಇಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದು, ಈಗ ಮಣಿಪಾಲದಲ್ಲಿ ತಮ್ಮ ಸೇವೆ ಮುಂದುವರಿಸುತ್ತಿದ್ದಾರೆ. ಅವರು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತ ಜನಮೆಚ್ಚಿಗೆ ಗಳಿಸಿದ್ದಾರೆ. ತಾವು ವೈಯಕ್ತಿಕ ಕಾರಣಗಳಿಂದಾಗಿ ಕಾರ್ಯಕ್ರಮದಲ್ಲಿ ಹಾಜರಾಗಲಿಲ್ಲದ ಕಾರಣ, ಈ ವೇಳೆ ಅವರ ಸನ್ಮಾನವನ್ನು ಮುಂದೂಡಲಾಯಿತು.

12.2.    ಮಣಿಪಾಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಶ್ರೀ ದೇವರಾಜ್ ಟಿ.ವಿ. ಅವರನ್ನು ಸನ್ಮಾನಿಸಲು ನಿರ್ಧರಿಸಲಾಗಿತ್ತು. ಅವರು ತಾವು ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ, ಆದರೂ ಅವರ ಪೊಲೀಸ್ ಇಲಾಖೆಯ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ERWA ಗುರುತಿಸಿ ಅವರಿಗೆ ಗೌರವ ಸಲ್ಲಿಸಿತು. ಶ್ರೀ ದೇವರಾಜ್ ಅವರು ತಮ್ಮ ಕರ್ತವ್ಯದಲ್ಲಿ ಅನುಸರಣೀಯ ಸಾಧನೆಗಳನ್ನು ತೋರಿದ್ದಾರೆ, ಹಾಗೂ ಅವರು ಭಾಗವಹಿಸದಿದ್ದರೂ, ERWA ಅವರ ಸೇವೆಯನ್ನು ಸ್ಮರಿಸಿ, ಕೃತಜ್ಞತೆಗಳನ್ನು ಸಲ್ಲಿಸಿತು.

12.3.    ERWA ತನ್ನ ಸಮುದಾಯದಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತೊಂದು ಪ್ರಮುಖ ವ್ಯಕ್ತಿಯು, ಈಶ್ವರ ನಗರದಲ್ಲಿ ಕಸ ಸಂಗ್ರಹದ ಉಸ್ತುವಾರಿ ವಹಿಸಿರುವ ಶ್ರೀ ಪ್ರಶಾಂತ್ ಹಾಗೂ ಬೀದಿದೀಪಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಶ್ರೀ ರಮೇಶ್ ಶೆಟ್ಟಿಗಾರರು. ಇವರ ಪ್ರಮುಖ ಕೊಡುಗೆಗಳನ್ನು ಗುರುತಿಸುತ್ತ, ERWA ಸನ್ಮಾನ ಸಮಾರಂಭದಲ್ಲಿ ಗೌರವಿಸಲಾಯಿತು. ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಲು, ಶ್ರೀ ಹರೀಶ್ ಕಲ್ಮಾಡಿ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು.


12.4.    ಈಶ್ವರ ನಗರದ ತಾಜ್ಯ ನಿರ್ವಹಣೆಯನ್ನು ನಿಭಾಯಿಸುತ್ತಿರುವ ವಾಹನದ ಮೂವರು ಸಿಬಂಧಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.


13.  ಹೊಸ ಸದಸ್ಯರ ಪರಿಚಯ

ನಮ್ಮ ಈಶ್ವರ ನಗರ Associationನಲ್ಲಿ ಹೊಸ ಸದಸ್ಯರು ಮತ್ತು ಯುವ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಿಂದ ಹೊಸ ಆಲೋಚನೆಗಳು ಹಾಗೂ ಆಧುನಿಕ ದೃಷ್ಠಿಕೋನ ನಮ್ಮ ಅಸೋಸಿಯೇಶನ್‌ ಚಟುವಟಿಕೆಗ ನವೋತ್ಸಾಹವನ್ನು ಒದಗಿಸುತ್ತದೆ. ಸಂಘದ ಮುಂದಿನ ಬೆಳಯುವಿಕೆಗೆ ಮತ್ತು ಅಭಿವೃದ್ಧಿಗೆ ಈ ಸದಸ್ಯರ ಪಾತ್ರ ಅನನ್ಯವಾಗಿದೆ. ನಮ್ಮ ಹೊಸ ಸದಸ್ಯರನ್ನು ಪರಿಚಯವನ್ನು ಸಂಘದ ಉಪಾಧ್ಯಕ್ಷರಾದ ಡಾ. ಶ್ಯಾಮ ಸುಂದರ ಭಟ್‌ ಾವರು ನೆರವೇರಿಸಿದರು.

 

14.  Appreciation by our Senior Advisor Dr. Gowri

ಈಶ್ವರ ನಗರ ರೆಸಿಡೆನ್ಷಿಯಲ್ ವೆಲ್ಫೇರ್ ಅಸೋಸಿಯೇಷನ್‌ನ ಹಿರಿಯ ಸಲಹೆಗಾರರಾದ ಡಾ. ಗೌರಿ, ERWA ಸದಸ್ಯರ ಬದ್ಧತೆ ಮತ್ತು ಸಮರ್ಪಣೆಯನ್ನು ಪ್ರಶಂಸಿಸಿದರು.

15.  ಸಹಕಾರ ಮತ್ತು ವಂದನೆ: ಕಾರ್ಯಕ್ರಮದ ಅಂತ್ಯದಲ್ಲಿ ಡಾ. ರಘು ಚಂದ್ರ ಶೇಖರ್ ಅವರು ಎಲ್ಲ ಅತಿಥಿಗಳು, ಸದಸ್ಯರು ಮತ್ತು ನಾಗರಿಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ನಾವು ಒಂದೆಡೆ ಒಗ್ಗಟ್ಟಿನಿಂದ ಈ ಸಮಾಜವನ್ನು ಅಭಿವೃದ್ದಿಗೊಳಿಸುತ್ತಿದ್ದೇವೆ," ಎಂದು ಹೇಳಿದರು. ಡಾ. ಸುರೇಶರಮಣ ಮಯ್ಯ ಅವರು ಕಾರ್ಯಕ್ರಮಗಳನ್ನು  ನಿರೂಪಿಸಿದರು. ಶ್ರೀ ಹರೀಶ್‌ ಜೆ ಕಲ್ಮಾಡಿಯವರು ಸಹಕರಿಸಿದ್ದರು.

16.  ಮನರಂಜನೆ ಮತ್ತು ಕಾರ್ಯಕ್ರಮದ ಸಮಾರೋಪ: ಈಶ್ವರ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಪನಗೊಂಡಿತು. ಡಾ. ಶೋಭಾ ಕಾಮತ್‌ ಅವರು ಈ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಶಶಿಕಲಾ ರಾಜವರ್ಮ ಅವರು ಮನರಂಜನ ಕಾರ್ಯಕ್ರಮವನ್ನು ಸಂಯೋಜಿಸುವಲ್ಲಿ ಸಹಕರಿಸಿದ್ದರು. ನೃತ್ಯ ತರಬೇತಿದಾರರಾದ ಶ್ರೀಮತಿ ಮುಕ್ತರನ್ನು ಅಸೋಸಿಯೇಶನ್‌ವತಿಯಿಂದ ಸನ್ಮಾನಿಸಲಾಯಿತು.

  ಮನರಂಜನಾ ಕಾರ್ಯಕ್ರಮದಲ್ಲಿ ಈ ಕೆಳಗೆ ತೋರಿಸಿದಂತೆ ಸದಸ್ಯರು ಹಾಗೂ ಮಕ್ಕಳು ಭಾಗವಹಿಸಿದ್ದರು.

ನೃತ್ಯ ರೂಪಕ:

ನಿರ್ದೇಶನ: ಮುಕ್ತ ನಾಗೇಶ್‌

ಭಾಗವಹಿಸಿದವರು: ಮುಕ್ತ ನಾಗೇಶ್‌, ಪ್ರಣವಿ ಶೆಣ್ಯೆ, ಸುಧಾಮ, ಸಂಧ್ಯಾ ರಾವ್‌, ರಮ್ಯ ಹರೀಶ್‌ ಕಲ್ಮಾಡಿ, ಅರ್ಚನಾ ಭಕ್ತ, ಶಕುಂತಲ ಶ್ರೀನಿವಾಸ ಪೂಜಾರಿ, ಶಶಿಕಲಾ ರಾಜವರ್ಮ ಅರಿಗ, ಡಾ. ಲಾವಣ್ಯ, ಶೋಭಾ ಶೆಣ್ಯೆ, ಸರಳ ನಾಗರಾಜ್‌, ಸುಜಾತಾ, ಡಾ. ಗೌರಿ


ಹಾಡು ಹಾಡಿದವರು ಹಾಗೂ ವಾದ್ಯ ಸಂಗೀತ:

ಡಾ. ಲಾವಣ್ಯ ಹಾಗೂ ಸೆಬೇಸ್ಟಿಯನ್, ಸಿದ್ಧಾರ್ಥ ಅಡಿಗ, ಪ್ರಧ್ಯುಮ್ನ ಅಡಿಗ, ಡಾ. ಉಲ್ಲಾಸ್‌ ಕಾಮತ್‌, ಪ್ರಕಾಶ್‌ ಶೆಣ್ಯೆ, ಡಾ. ವಿನಾಯಕ್‌ ಶೆಣ್ಯೆ, ಸದಾನಂದ, ವಂಶಿ, ವಿಭಾ




 ಕೆಲವು Photosಗಳನ್ನು ಈ ಕೆಳಗೆ ಕೊಡಲಾಗಿದೆ.














































































































🕊️ In Loving Memory of Sri Srinivas Rao – The Guiding Light of Eshwar Nagar

It was a deeply saddening day for all of us in Eshwar Nagar . We received the shocking news that Sri Srinivas Rao , the Senior Advisor of t...