Saturday, 30 October 2021

ಉಡುಪಿ ನಗರಸಭೆ ಮತ್ತು ಈಶ್ವರನಗರ ರೆಸಿಡೆಂಟ್ಸ್‌ ವೆಲ್ಪೇರ್‌ ಅಸೋಸಿಯೇಶನ್‌ ಇವರ ಸಹಭಾಗಿತ್ವದಲ್ಲಿ ಸ್ಚಚ್ಛ ಭಾರತ್‌ ಅಭಿಯಾನ

 ಮಾನ್ಯ ಸದಸ್ಯರೇ,

ಇವತ್ತು ನಮ್ಮ ಈಶ್ವರ ನಗರದಲ್ಲಿ ನಡೆದ ಸ್ವಚ್ಚ ಭಾರತ ಅಭಿಯಾನವು ಎಲ್ಲರ ಸಹಕಾರದಿಂದ ಬಹಳ ಯಶಸ್ವಿಯಾಗಿ  ನಡೆಯಿತು.

ಕಾರ್ಯಕ್ರಮಕ್ಕೆ ಅತಿಥಿ ಗಳಾಗಿ ಬಂದು ನಮ್ಮನ್ನೆಲ್ಲ ಹುರಿದುಂಬಿಸಿದ ನಗರಸಭಾ ಪೌರಾಯುಕ್ತರಾದ ಡಾ. ಉದಯ ಶೆಟ್ಟಿ ಹಾಗೂ ಅಧ್ಯಕ್ಷರಾದ ಶ್ರೀಮತಿ. ಸುಮಿತ್ರಾ ಆರ್. ನಾಯಕ್ ಅವರಿಗೆ ಕೃತಜ್ಞತೆಗಳು. ಈ ಕಾರ್ಯಕ್ರಮ ನಮ್ಮ ವಾರ್ಡಿನಲ್ಲಿ ನಡೆಯಸಲು ನಾಯಕತ್ವ ಹಾಗೂ ಮುತುವರ್ಜಿ ವಹಿಸಿ ಸ್ವತಃ ನಿಂತು  ಸಾಂಗವಾಗಿ ನಡೆಸಿ ಕೊಟ್ಟ ನಮ್ಮ ವಾರ್ಡಿನ ಕೌಂಸಿಲರ್ ಆದ ಶ್ರೀ. ಮಂಜುನಾಥ್ ಅವರಿಗೆ, ERWA ನ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಸಹಕರಿಸಿದ ಎಲ್ಲ ನಿವಾಸಿಗಳಿಗೆ, ನಗರಸಭೆಯ ಎಲ್ಲಾ ಸಿಬಂದಿ ವರ್ಗದವರಿಗೆ ನಮ್ಮ ವಾರ್ಡಿನ ಎಲ್ಲಾ ನಾಗರಿಕರ ಪರವಾಗಿ ನಾನು ERWA ಯ ಅಧ್ಯಕ್ಷೀಯ ನೆಲೆಯಲ್ಲಿ ನನ್ನ ಹೃತ್ಪೂರ್ವಕ ಧನ್ಯವಾದವನ್ನು ಸಮರ್ಪಿಸುತ್ತೇನೆ. ಇವತ್ತಿನ ಕಾರ್ಯಕ್ರಮದ ಬಗ್ಗೆ ನಿಮ್ನ ಅನಿಸಿಕೆಗಳು ಹಾಗೂ ಇಂಥಹ ಮುಂದಿನ ಕಾರ್ಯಕ್ರಮಗಳಿಗೆ ಸಲಹೆ ಸೂಚನೆಗಳು ಏನಾದರೂ ಇದ್ದಲ್ಲಿ ಗ್ರೂಪಿನಲ್ಲಿ ಪೋಸ್ಟ್ ಮಾಡಬೇಕಾಗಿ ವಿನಂತಿ.

ತಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇಂಥಹ ಇನ್ನೂ ಹಲವು ಸಮಾಜಮುಖಿ ಕಾರ್ಯಕ್ರಮಗಳು ನಮ್ಮ ಈಶ್ವರ ನಗರದಲ್ಲಿ ನಡೆಯಲಿ ಎಂದು ಆಶಿಸಿ ಅದಕ್ಕೆ ನೀವೆಲ್ಲರೂ  ಇದೇ ರೀತಿಯಲ್ಲಿ ಸಹಕಾರ ನೀಡಬೇಕಾಗಿ ವಿನಂತಿಸುತ್ತೆನೆ. ಧನ್ಯವಾದಗಳು.

ದಿನಕರ ಶೆಟ್ಟಿ, ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ, ಈಶ್ವರನಗರ ರೆಸಿಡೆನ್ಸಿಯಲ್‌ ಅಸೋಸಿಯೇಶನ್‌, ಈಶ್ವರನಗರ, ಮಣಿಪಾಲ - 576104






ಬೆಳಿಗ್ಗೆ ಶ್ರೀ ದಿನಕರ ಶೆಟ್ಟರ ಮನೆಯಲ್ಲಿ ಪೌರ ಕಾರ್ಮಿಕರಿಗೆ ಮೂಡೆಯೊಂದಿಗೆ ಚಾ

ಮದ್ಯಾಹ್ನ ನಮ್ಮ ಕೌನ್ಸಿಲರ್‌ ಮಂಜುನಾಥ ಪೌರ ಕಾರ್ಮಿಕರೊಂದಿಗೆ ಸಹಭೋಜನ: ನಮ್ಮ ಅದ್ಯಕ್ಷರಾದ ಸಿಎ ದಿನಕರ ಶೆಟ್ಟರ ಮನೆಯಲ್ಲಿ

















ಕಾರ್ಯಕ್ರಮದ ನೋಟ: ವೀಡಿಯೋ ಮುಖಾಂತರ



For more information, click here

Wednesday, 27 October 2021

ಈಶ್ವರನಗರ ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಉಡುಪಿ ನಗರ ಸಭಾ ವತಿಯಿಂದ ಸ್ವಚ್ಛ ಬಾರತ ಅಭಿಯಾನ

 ಆತ್ಮೀಯರೇ

ಉಡುಪಿ ನಗರಸಭೆ ಆಯೋಜಿಸಿರುವ 15 ದಿನಗಳ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಈಶ್ವರ ನಗರ ವಾರ್ಡ್ ನಲ್ಲಿ ದಿನಾಂಕ 30.10.2021 ರಂದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆ ದಿನ ನಗರಸಭೆಯ ಸ್ವಚ್ಚತಾ ಯಂತ್ರೋಪಕರಣಗಳ ಸಹಿತ ಸ್ವಚ್ಚತಾ ಕಾರ್ಮಿಕರು ವಾರ್ಡ್ ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಸ್ವಚ್ಚತಾ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಅಭಿಯಾನದ ಪ್ರಥಮ ಹಂತವಾಗಿ ಈಶ್ವರನಗರ ಮುಖ್ಯ ರಸ್ತೆಗಳು (MAIN, 1ST, 2ND, 3RD), ಮತ್ತು ಒಂದನೇ ಅಡ್ಡ ರಸ್ತೆಯಿಂದ 21 ನೇ ಅಡ್ಡ ರಸ್ತೆಗಳವರೆಗಿನ ಭಾಗಗಳನ್ನು ಆಯ್ಕೆ ಮಾಡಿ ಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ನಮ್ಮ ವಾರ್ಡ್ ನ ಇತರ ಪ್ರದೇಶಗಳಿಗೆ ವಿಸ್ತರಿಸಲಾಗುತ್ತದೆ.  

ಈ ಅಭಿಯಾನದಲ್ಲಿ ಪ್ರಮುಖವಾಗಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈಶ್ವರನಗರ ರೆಸಿಡೆನ್ಶಿಯಲ್ ವೆಲ್ ಫೇರ್ ಅಸೋಸಿಯೇಷನ್ ಈ ಸ್ವಚ್ಛತಾ ಅಭಿಯಾನದ ನೇತ್ರತ್ವ ವಹಿಸಿ ಕೊಳ್ಳಲಿದೆ. ಆ ದಿನ ಬೆಳಿಗ್ಗೆ 6.45 ಗಂಟೆಗೆ ಈಶ್ವರನಗರ ಮುಖ್ಯ ವೃತ್ತದಲ್ಲಿ ಹದಿನೈದು ನಿಮಿಷಗಳ ಉದ್ಘಾಟನಾ ಕಾರ್ಯಕ್ರಮದ ಬಳಿಕ ಈ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಮೇಲೆ ಸೂಚಿಸಲಾದ ಪ್ರದೇಶಗಳ ಹೆಚ್ಚಿನ ಎಲ್ಲ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಒಂದು ಗಂಟೆಗಳ ಕಾಲ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿ ಕೊಳ್ಳ ಬೇಕು ಎಂದು ವಿನಯಪೂರ್ವಕ ಕೋರಿಕೆ. ಸ್ವಚ್ಛತಾ ಪರಿಕರಗಳ ವ್ಯವಸ್ಥೆಗಳಿವೆ.

ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಶರಾದ ಶ್ರೀಮತಿ ಸುಮಿತ್ರಾ ಆರ್ ನಾಯಕ್, ಪೌರಾಯುಕ್ತರಾದ ಡಾ. ಉದಯ ಶೆಟ್ಟಿ, ಮತ್ತು ನಗರಸಭೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ದಯವಿಟ್ಟು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವೀ ಗೊಳಿಸಬೇಕಾಗಿ ವಿನಂತಿ.  


ಮಂಜುನಾಥ್ ಮಣಿಪಾಲ

ನಗರಸಭಾ ಸದಸ್ಯರು.



Tuesday, 26 October 2021

Proceedings of Executive Committee Meeting held at the residence of CA Dinakar Shetty, President of the Eshwar Nagar Residents Welfare Association, on 26th October 2021

Meeting minutes of the ERWA Clean India program planning meeting held at CA. Dinakar Shetty's house on 30-10-2021 at 6 pm:

Attendance:

  • CA Dinakar Shetty (President)
  • Rajavarma Ariga (Vice President)
  • Prakash Shenoy (Secretary)
  • Nagaraj K. (Treasurer)
  • Dr. Yajnesh Sharma (Member)
  • Srinivasa Poojary (Member)
  • Ganapathi V. Kamath (Member)
  • Rajakumar Mascrenhas (Member)
  • Sheikh Noorulla (Member)
  • Harish J. Kalmadi (Member)
  • Manjunath (Councillor)

Agenda:

  1. Manjunath proposed the Clean India program on 30-10-2021 at Eshwarnagar, emphasizing maximum public participation.
  2. UCMC will provide 6 grass cutting machines with operators and 12 labourers to assist grass piling and waste packing, with about 25 members on site.
  3. A brief (15 minutes max) inaugural program at 7 am, likely to be attended by the Municipal Councillor and local MLA Raghupathi Bhat.
  4. Simultaneous grass cutting and waste picking activities will take place at the pre-identified mains and crosses of the ward.
  5. EWRA to bear the cost of tea and refreshments at 10:30 am and lunch at 2 pm for the UCMC staff on site.
  6. The program will end at the Narasinge Circle in front of Auto Bar at 2 pm.
  7. ERWA Executive Committee members will survey and identify potential grass cutting areas and guide the grass cutting machine operators.
  8. ERWA to inform its members well in advance and ensure maximum resident participation.

Other matters discussed:

  1. Identify stormwater problem areas and report to the councillor in the next meeting.
  2. Survey and report areas where tree branches touch electrical wires/cables.
  3. Study areas affected by dog nuisance related to waste disposal and report in the next meeting.
  4. Check and record all pole numbers with streetlights and report to MESCOM.
  5. Prepare a cost estimate for rectifying signboards and painting and put it up in the next EC meeting.
  6. Arrange for Health Camps in the future.
  7. Conduct door-to-door surveys and convince residents to become members of the Association in groups of 3-4 members. All suggestions will be discussed and decided upon at the next EC meeting

.







Sunday, 24 October 2021

ಧನ್ಯವಾದ ಸಮರ್ಪಣೆ

ಮಾನ್ಯ ERWA- ಈಶ್ವರ ನಗರ ನಿವಾಸಿಗಳ ಸಂಘದ ಎಲ್ಲಾ ಸದಸ್ಯರಿಗೆ ತಿಳಿಸುವುದೇನೆಂದರೆ ತಾ.23-10-2021 (ಶನಿವಾರ) ರಂದು ಬಬ್ಬುಸ್ವಾಮಿ ದೈವಸ್ಥಾನದ ಸಭಾಗ್ರಹದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ತಾವು ನನ್ನನ್ನು ಸಂಘದ 2021-23 ರ ಸಾಲಿನ ಅಧ್ಯಕ್ಷನನ್ನಾಗಿ ಚುನಾಯಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು.

ಸಂಘದ ಈ ಸಾಲಿಗೆ ಚುನಾಯಿತರಾದ ಪದಾಧಿಕಾರಿಗಳ ಪಟ್ಟಿಯನ್ನು ಈ ಕೆಳಗೆ ನೀಡಿದ್ದೇನೆ,ಹಾಗೂ ಅವರೆಲ್ಲರಿಗೆ ಶುಭಾಷಯವನ್ನು ಕೋರುತ್ತೇನೆ:

ಉಪಾಧ್ಯಕ್ಷರು- ರಾಜವರ್ಮ ಅರಿಗ.

ಕಾರ್ಯದರ್ಶಿ- ಕೆ. ಪ್ರಕಾಶ್ ಶೆಣೈ

ಉಪ ಕಾರ್ಯದರ್ಶಿ- ಕು.ಶುಭಾ H.N.S

ಖಜಾಂಚಿ- ನಾಗರಾಜ್ K.

ಕಾರ್ಯಕಾರಿ ಸಮಿತಿ ಸದಸ್ಯರು:

1. ಪ್ರೊ. ಸುರೇಶರಮಣ ಮಯ್ಯ.

2. ಪ್ರೊ.ಯಾಜ್ಞೆಶ್ ಶರ್ಮ.

3. ಶ್ರೀನಿವಾಸ ಪೂಜಾರಿ.

4. ಡಾ. ಬಾಲಚಂದ್ರ ಮುನಿಯಾಲ್.

5. ಹರೀಶ್ ಜೆ. ಕಲ್ಮಾಡಿ.

6. ಡಾ. ಶ್ಯಾಮಸುಂದರ್ ಭಟ್.

7. ಡಾ. ಅರುಣ್ ಮಯ್ಯ.

8.  ಶೇಕ್ ನೂರುಲ್ಲ.

9. ಗಣಪತಿ ವಿ. ಕಾಮತ್.

10. ರಾಜಕುಮಾರ್ ಮಸ್ಕ್ಯಾರೇನ್ಹಸ್.

ಗೌರವಾನ್ವಿತ ಸಲಹಾ ಸದಸ್ಯರು:

1. ಶ್ರೀ. ಶ್ರೀನಿವಾಸ್ ರಾವ್.

2. ಡಾ. ಗೌರಿ .ಜೆ.

3. ಪ್ರೊ. H. K. V. ರಾವ್.

 ಖಾಯಂ ಆಮಂತ್ರಿತರು:

ಶ್ರೀ. ಮಂಜುನಾಥ್, ನಗರಸಭಾ ಕೌಂಸಿಲರ್,ಈಶ್ವರ ನಗರ ವಾರ್ಡ್.

ಕೊರೊನಾದ ಸಂಕಷ್ಟ ಕಾಲ ಮುಗಿಯುತ್ತ ಬಂದಂತೆ, ಮುಂದಿನ ಸಾಲಿನಲ್ಲಿ ನಮ್ಮ ಈಶ್ವರ ನಗರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ತಮ್ಮೆಲ್ಲರ ಒಗ್ಗೂಡುವಿಕೆಯಿಂದ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿ ತಮ್ಮೆಲ್ಲರ ತುಂಬು ಹೃದಯದ ಸಹಕಾರವನ್ನು ಬಯಸುತ್ತೇನೆ.

ಧನ್ಯವಾದಗಳು.

ದಿನಕರ ಶೆಟ್ಟಿ, ಅಧ್ಯಕ್ಷರು

Notice of Executive Committee Meeting scheduled on 26-10-2021

 

Notice of Executive Committee Meeting scheduled on 26th October 2021

Request all office-bearers, including the Executive Committee members, to attend today's meeting at 6 pm at "Sri Sai Matha", 16th Cross, Eshwarnagar, our President CA. Dinakar Shetty's house. Please note that the meeting will start at sharp 6 pm. The meeting is expected to end by 7.30 pm.

Absentees, if any, must be informed well in advance.

Secretary, Eshwar Nagar Residents Welfare Association

Friday, 22 October 2021

15th Annual General Body Meeting of Eshwar Nagar Residential Association at Babbu Swami Temple Hall, Manipal

 ಈಶ್ವರನಗರ ರೆಸಿಡೆನ್ಸಿಯಲ್‌ ವೆಲ್ಪಾರ್ ಅಸೋಸಿಯೇಶನ್‌ (ರಿ) ಇದರ ಸರ್ವ ಸಾಧಾರಣ ಸಭೆ

ಈಶ್ವರನಗರ: ಓಕ್ಟೋಬರ್‌ 23 ರಂದು ಸಂಜೆ ಈಶ್ವರನಗರ ರೆಸಿಡೆನ್ಸಿಯಲ್‌ ಅಸೋಸಿಯೇಶನ್‌ ಇದರ 15 ನೇ ಸರ್ವ ಸಾಧಾರಣ ಸಭೆ ಮಣಿಪಾಲದ ಬಬ್ಬು ಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ತಾರೀಕು 23-10-2021ರಂದು ಜರಗಿತು. ಪ್ರಾರಂಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ. ಸುರೇಶರಮಣ ಮಯ್ಯ ಅವರು ಸ್ವಾಗತಿಸಿ, ಕಳೆದ ಸಾಲಿನಲ್ಲಿ ಅಸೋಸಿಯೇಶನ್‌ ಹಮ್ಮಿಕೊಂಡ ಕಾರ್ಯಕ್ರಮಗಳ ಬಗೆಗೆ ಬೆಳಕು ಚೆಲ್ಲಿದರು. ನಂತರ ಕಾರ್ಯದರ್ಶಿಯಾದ ಶ್ರೀ ನಾಗರಾಜ ಕೆ ಅವರು ಅಸೋಸಿಯೇಶನ್‌ನ ವಿಸೃತ ವರದಿಯನ್ನು ಮಂಡಿಸಿದರು. ಸಂಘದ ಖಜಾಂಚಿಯಾಗಿದ್ದ ಡಾ. ರಾಘವೇಂದ್ರ ಕಾಮತ್‌ ಕಳೆದ ಸಾಲಿನ ಲೆಕ್ಕಪತ್ರವನ್ನು ಮಂಡಿಸಿ ಸದಸ್ಯರ ಅನುಮೋದನೆಯನ್ನು ಪಡೆದರು. ನಂತರ ಚುನಾವಣಾಧಿಕಾರಿಯಾಗಿದ್ದ ಪ್ರೊ. ಹೆಚ್‌ಕೆವಿ ರಾವ್‌ ನೇತೃತ್ವದಲ್ಲಿ ನೂತನ ಪಧಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಿ.ಎ. ದಿನಕರ ಶೆಟ್ಟಿ. ಕೆ ಅವರು ಅಸೋಸಿಯೇಶನ್‌ನ ಅಧ್ಯಕ್ಷರಾಗಿ, ಶ್ರೀ. ಪ್ರಕಾಶ ಶೆಣೈ ಕಾರ್ಯದರ್ಶಿಗಳಾಗಿ, ಡಾ. ಶುಭ ಹೆಚ್‌ ಎನ್‌ ಎಸ್‌ ರಾವ್‌ ಜತೆ ಕಾರ್ಯದರ್ಶಿಗಳಾಗಿ, ಶ್ರೀ ರಾಜವರ್ಮ ಅರಿಗರು ಉಪಾಧ್ಯಕ್ಷರಾಗಿ, ಶ್ರೀ ನಾಗರಾಜ್‌ ಕೆ ಅವರು ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ ಯಜ್ನೇಶ್‌ ಶರ್ಮ, ಡಾ. ಬಾಲಚಂದ್ರ ಮುನಿಯಾಲ್‌, ಡಾ ಸುರೇಶರಮಣ ಮಯ್ಯ, ಡಾ ಶ್ಯಾಮಸುಂದರ್‌ ಭಟ್‌, ಹರೀಶ್‌ ಜಿ ಕಲ್ಮಾಡಿ, ಶ್ರೀ ಶೇಕ್‌ ನುರುಲ್ಲ, ಶ್ರೀ ರಾಜಕುಮಾರ್‌ ಮಸ್ಕರೇನಸ್‌, ಶ್ರೀ ಗಣಪತಿ ಕಾಮತ್‌, ಶ್ರೀ ಶ್ರೀನಿವಾಸ ಪೂಜಾರಿ ಹಾಗೂ ಡಾ. ಅರುಣ ಮಯ್ಯ ಅವರನ್ನು ಅವರೋಧವಾಗಿ ಆಯ್ಕೆ ಮಾಡಲಾಯಿತು. ಅಲ್ಲದೆ ಖಾಯಂ ಸದಸ್ಯರಾಗಿ, ಕೌನ್ಸಿಲರ್‌ ಆಗಿರುವ  ಶ್ರೀ ಮಂಜುನಾಥ ಅವರನ್ನು ಆಯ್ಕೆ ಮಾಡಲಾಯಿತು. ಶ್ರೀ ಶ್ರೀನಿವಾಸ ರಾವ್‌, ಡಾ. ಹೆಚ್. ಗೌರಿ ಹಾಗೂ ಪ್ರೊ ಹೆಚ್ ಕೆ ವಿ ರಾವ್‌ ಅವರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಲಾಯಿತು.



ಹೊಸದಾಗಿ ಆಯ್ಕೆ ಆದ ಸಿ ಎ. ದಿನಕರ ಶೆಟ್ಟಿ ಮಾತನಾಡುತ್ತಾ, “ಇದು ಸುಮಾರು 15 ವರ್ಷಗಳ ಹಿನ್ನಲೆ ಇರುವ ಸಂಸ್ಥೆ. ಇಂತಹ ಓಂದು ಸಂಸ್ಥೆ ಸುಮಾರು ಹದಿನ್ಯೆದು ವರ್ಷಗಳ ಕಾಲ ಅಸ್ಥಿತ್ವದಲ್ಲಿ ಇರುವುದೇ ಒಂದು ಸಾಧನೆ. ಹಿಂದೆ ತಿರುಗಿ ನೋಡಿದಾಗ ಈ ಸಂಸ್ಥೆ ಈ ಪ್ರದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಇಲ್ಲಿ ಸ್ವಚ್ಛತೆಯ ಪರಿಕಲ್ಪನೆಯನ್ನು ಉಂಟು ಮಾಡುವಲ್ಲಿ, ಮಳೆ ನೀರು ಹರಿದು ಹೋಗಲು ಕಾಲುವೆಗಳನ್ನು ನಿರ್ವಹಿಸುವಲ್ಲಿ, ಈ ಎಲ್ಲಾ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸುವಲ್ಲಿ, ಮಾರ್ಗದ ಡಾಮರೀಕರಣ ಕೆಲಸಗಳಿರಲಿ, ದಾರಿ ದೀಪದ ನಿರ್ವಹಣೆ, ಹೀಗೆ ಸಾಮೂಹಿಕ ಹಿತರಕ್ಷಣೆಯ ಯಾವುದೇ ಕಾರ್ಯಕ್ರಮಗಳಿರಲಿ, ಈ ಈಶ್ವರನಗರ ರೆಸಿಡೆನ್ಸಿಯಲ್‌ ವೆಲ್ಪಾರ್‌ ಅಸೋಸಿಯೇಶನ್‌ ತನ್ನ ಚೌಕಟ್ಟಿನೊಳಗೆ ಸ್ಥಳೀಯ ಕೌನ್ಸಿಲರ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾದ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ ಕೊರೊನಾ 19 ಸ್ಪೋಟವಾಗುವ ಮೊದಲಿನ ಕಾಲದಲ್ಲಿ ಪರಸ್ಪರ ಇಲ್ಲಿಯ ಸ್ಥಳೀಯರನ್ನು ಬೆಸೆಯುವ ಸಾಂಸ್ಕೃತಿಕ ಕೊಂಡಿಯಾಗಿಯೂ ಕಾರ್ಯ ನಿರ್ವಹಿಸುವುದನ್ನು ನಾನು ಈ ಹಿಂದೆ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದುಕೊಂಡು ನೋಡಿದ್ದೆ. ನಾವೆಲ್ಲ ಒಟ್ಟು ಸೇರಿ ಈ ಪ್ರದೇಶದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಸಲ್ಲಿಸೋಣ. ಈ ದಿಸೆಯಲ್ಲಿ ನಿಮ್ಮ ಸಲಹೆ, ಸಹಕಾರ, ಸ್ಥಳೀಯ ಕೌನ್ಸಿಲರ ಮಾರ್ಗದರ್ಶನ ಅಗತ್ಯ.

ಶ್ರೀ ಹರೀಶ್‌ ಕಲ್ಮಾಡಿ ಅವರು ಕಾರ್ಯಕ್ರಮಗಳನ್ನು ಸಂಯೋಜಿಸಿದ್ದರು. ಸುಮಾ ನಾಯಕ್‌ ಹಾಗೂ ನಾಗರಾಜ ಕೆ ಅವರು ಹೊಸ ಸದಸ್ಯರನನು ಸಭೆಗೆ ಪರಿಚಯಿಸಿದರು. ಯಜ್ನೇಶ್‌ ಶರ್ಮ ಅವರು ನೂತನ ಅದ್ಯಕ್ಷರನ್ನು ಪರಿಚಯಿಸಿದರು. ಸ್ಥಳೀಯ ಕೌನ್ಸಿಲರ್‌ ಆದ ಶ್ರೀ ಮಂಜುನಾಥ ಅವರು ವಿವರವಾಗಿ ಮಾತನಾಡುತ್ತಾ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಶ್ರೀ ಪ್ರಕಾಶ್‌ ಶೆಣ್ಯೆ ವಂದಿಸಿದರು.











































































🕊️ In Loving Memory of Sri Srinivas Rao – The Guiding Light of Eshwar Nagar

It was a deeply saddening day for all of us in Eshwar Nagar . We received the shocking news that Sri Srinivas Rao , the Senior Advisor of t...