ಮಾನ್ಯ ಸದಸ್ಯರೇ,
ಇವತ್ತು ನಮ್ಮ ಈಶ್ವರ ನಗರದಲ್ಲಿ ನಡೆದ ಸ್ವಚ್ಚ ಭಾರತ ಅಭಿಯಾನವು ಎಲ್ಲರ ಸಹಕಾರದಿಂದ ಬಹಳ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಅತಿಥಿ ಗಳಾಗಿ ಬಂದು ನಮ್ಮನ್ನೆಲ್ಲ ಹುರಿದುಂಬಿಸಿದ ನಗರಸಭಾ ಪೌರಾಯುಕ್ತರಾದ ಡಾ. ಉದಯ ಶೆಟ್ಟಿ ಹಾಗೂ ಅಧ್ಯಕ್ಷರಾದ ಶ್ರೀಮತಿ. ಸುಮಿತ್ರಾ ಆರ್. ನಾಯಕ್ ಅವರಿಗೆ ಕೃತಜ್ಞತೆಗಳು. ಈ ಕಾರ್ಯಕ್ರಮ ನಮ್ಮ ವಾರ್ಡಿನಲ್ಲಿ ನಡೆಯಸಲು ನಾಯಕತ್ವ ಹಾಗೂ ಮುತುವರ್ಜಿ ವಹಿಸಿ ಸ್ವತಃ ನಿಂತು ಸಾಂಗವಾಗಿ ನಡೆಸಿ ಕೊಟ್ಟ ನಮ್ಮ ವಾರ್ಡಿನ ಕೌಂಸಿಲರ್ ಆದ ಶ್ರೀ. ಮಂಜುನಾಥ್ ಅವರಿಗೆ, ERWA ನ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಸಹಕರಿಸಿದ ಎಲ್ಲ ನಿವಾಸಿಗಳಿಗೆ, ನಗರಸಭೆಯ ಎಲ್ಲಾ ಸಿಬಂದಿ ವರ್ಗದವರಿಗೆ ನಮ್ಮ ವಾರ್ಡಿನ ಎಲ್ಲಾ ನಾಗರಿಕರ ಪರವಾಗಿ ನಾನು ERWA ಯ ಅಧ್ಯಕ್ಷೀಯ ನೆಲೆಯಲ್ಲಿ ನನ್ನ ಹೃತ್ಪೂರ್ವಕ ಧನ್ಯವಾದವನ್ನು ಸಮರ್ಪಿಸುತ್ತೇನೆ. ಇವತ್ತಿನ ಕಾರ್ಯಕ್ರಮದ ಬಗ್ಗೆ ನಿಮ್ನ ಅನಿಸಿಕೆಗಳು ಹಾಗೂ ಇಂಥಹ ಮುಂದಿನ ಕಾರ್ಯಕ್ರಮಗಳಿಗೆ ಸಲಹೆ ಸೂಚನೆಗಳು ಏನಾದರೂ ಇದ್ದಲ್ಲಿ ಗ್ರೂಪಿನಲ್ಲಿ ಪೋಸ್ಟ್ ಮಾಡಬೇಕಾಗಿ ವಿನಂತಿ.
ತಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇಂಥಹ ಇನ್ನೂ ಹಲವು ಸಮಾಜಮುಖಿ ಕಾರ್ಯಕ್ರಮಗಳು ನಮ್ಮ ಈಶ್ವರ ನಗರದಲ್ಲಿ ನಡೆಯಲಿ ಎಂದು ಆಶಿಸಿ ಅದಕ್ಕೆ ನೀವೆಲ್ಲರೂ ಇದೇ ರೀತಿಯಲ್ಲಿ ಸಹಕಾರ ನೀಡಬೇಕಾಗಿ ವಿನಂತಿಸುತ್ತೆನೆ. ಧನ್ಯವಾದಗಳು.
ದಿನಕರ ಶೆಟ್ಟಿ, ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ, ಈಶ್ವರನಗರ ರೆಸಿಡೆನ್ಸಿಯಲ್ ಅಸೋಸಿಯೇಶನ್, ಈಶ್ವರನಗರ, ಮಣಿಪಾಲ - 576104
![]() |
ಬೆಳಿಗ್ಗೆ ಶ್ರೀ ದಿನಕರ ಶೆಟ್ಟರ ಮನೆಯಲ್ಲಿ ಪೌರ ಕಾರ್ಮಿಕರಿಗೆ ಮೂಡೆಯೊಂದಿಗೆ ಚಾ |
![]() |
ಮದ್ಯಾಹ್ನ ನಮ್ಮ ಕೌನ್ಸಿಲರ್ ಮಂಜುನಾಥ ಪೌರ ಕಾರ್ಮಿಕರೊಂದಿಗೆ ಸಹಭೋಜನ: ನಮ್ಮ ಅದ್ಯಕ್ಷರಾದ ಸಿಎ ದಿನಕರ ಶೆಟ್ಟರ ಮನೆಯಲ್ಲಿ |
No comments:
Post a Comment