ಆತ್ಮೀಯರೇ
ಉಡುಪಿ ನಗರಸಭೆ ಆಯೋಜಿಸಿರುವ 15 ದಿನಗಳ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಈಶ್ವರ ನಗರ ವಾರ್ಡ್ ನಲ್ಲಿ ದಿನಾಂಕ 30.10.2021 ರಂದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆ ದಿನ ನಗರಸಭೆಯ ಸ್ವಚ್ಚತಾ ಯಂತ್ರೋಪಕರಣಗಳ ಸಹಿತ ಸ್ವಚ್ಚತಾ ಕಾರ್ಮಿಕರು ವಾರ್ಡ್ ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಸ್ವಚ್ಚತಾ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಅಭಿಯಾನದ ಪ್ರಥಮ ಹಂತವಾಗಿ ಈಶ್ವರನಗರ ಮುಖ್ಯ ರಸ್ತೆಗಳು (MAIN, 1ST, 2ND, 3RD), ಮತ್ತು ಒಂದನೇ ಅಡ್ಡ ರಸ್ತೆಯಿಂದ 21 ನೇ ಅಡ್ಡ ರಸ್ತೆಗಳವರೆಗಿನ ಭಾಗಗಳನ್ನು ಆಯ್ಕೆ ಮಾಡಿ ಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ನಮ್ಮ ವಾರ್ಡ್ ನ ಇತರ ಪ್ರದೇಶಗಳಿಗೆ ವಿಸ್ತರಿಸಲಾಗುತ್ತದೆ.
ಈ ಅಭಿಯಾನದಲ್ಲಿ ಪ್ರಮುಖವಾಗಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈಶ್ವರನಗರ ರೆಸಿಡೆನ್ಶಿಯಲ್ ವೆಲ್ ಫೇರ್ ಅಸೋಸಿಯೇಷನ್ ಈ ಸ್ವಚ್ಛತಾ ಅಭಿಯಾನದ ನೇತ್ರತ್ವ ವಹಿಸಿ ಕೊಳ್ಳಲಿದೆ. ಆ ದಿನ ಬೆಳಿಗ್ಗೆ 6.45 ಗಂಟೆಗೆ ಈಶ್ವರನಗರ ಮುಖ್ಯ ವೃತ್ತದಲ್ಲಿ ಹದಿನೈದು ನಿಮಿಷಗಳ ಉದ್ಘಾಟನಾ ಕಾರ್ಯಕ್ರಮದ ಬಳಿಕ ಈ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಮೇಲೆ ಸೂಚಿಸಲಾದ ಪ್ರದೇಶಗಳ ಹೆಚ್ಚಿನ ಎಲ್ಲ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಒಂದು ಗಂಟೆಗಳ ಕಾಲ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿ ಕೊಳ್ಳ ಬೇಕು ಎಂದು ವಿನಯಪೂರ್ವಕ ಕೋರಿಕೆ. ಸ್ವಚ್ಛತಾ ಪರಿಕರಗಳ ವ್ಯವಸ್ಥೆಗಳಿವೆ.
ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಶರಾದ ಶ್ರೀಮತಿ ಸುಮಿತ್ರಾ ಆರ್ ನಾಯಕ್, ಪೌರಾಯುಕ್ತರಾದ ಡಾ. ಉದಯ ಶೆಟ್ಟಿ, ಮತ್ತು ನಗರಸಭೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ದಯವಿಟ್ಟು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವೀ ಗೊಳಿಸಬೇಕಾಗಿ ವಿನಂತಿ.
ಮಂಜುನಾಥ್ ಮಣಿಪಾಲ
ನಗರಸಭಾ ಸದಸ್ಯರು.
No comments:
Post a Comment